Header Ads
Breaking News

ಹೆಜಮಾಡಿಯ ಕನ್ನಾಂಗಾರುವಿನಲ್ಲಿ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ, ಇಬ್ಬರು ಮಕ್ಕಳಿಗೆ ಗಾಯ

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಟ್ಟಡವೊಂದಕ್ಕೆ ಡಿಕ್ಕಿಯಾಗಿ, ಬಳಿಕ ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಹೆಜಮಾಡಿಯ ಕನ್ನಾಂಗಾರು ಎಂಬಲ್ಲಿ ಸಂಭವಿಸಿದೆ.
ಗುಜರಾತಿನಿಂದ ಕೇರಳಕ್ಕೆ ಬರುತ್ತಿದ್ದ ಕಾರು ಬೀಡು ಎಂಬ ಬಳಿ ನಾಯಿಯೊಂದು ಅಡ್ಡ ಬಂದ ಹಿನ್ನಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಅಪಘಾತ ತೀವ್ರತೆಗೆ ಕಟ್ಟಡಕ್ಕೆ ಹಾನಿಯಾಗಿದ್ದಲ್ಲದೆ ವಿದ್ಯುತ್ ಕಂಬ ಸಹಿತ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಆಗಮಿಸಿದ ಟೋಲ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಪಡುಬಿದ್ರಿ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *