Header Ads
Header Ads
Breaking News

ಹೆಜಮಾಡಿ:ವಿದ್ಯಾರ್ಥಿಗಳು ಮಾನವ ಸರಪಳಿ ನಡೆಸುವ ಮೂಲಕ ಯೋಧರಿಗೆ ನಮನ

ಶ್ರೀನಗರದ ಪುಲ್ವಾಮ ಹೆದ್ದಾರಿಯಲ್ಲಿ ಪಾಕ್ ಪ್ರೇರಿತ ಉಗ್ರರಿಂದ ಅಮಾನುಷವಾಗಿ ವೀರ ಜವಾನರ ವೀರ ಮರಣದಿಂದ ದೇಶದ ಉದ್ದಗಲಕ್ಕೂ ವ್ಯಾಪಕ ಜನಾಕ್ರೋಷ ವ್ಯಕ್ತವಾಗಿದೆ. ಮಡಿದ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಇದಕ್ಕೆ ಪ್ರತೀಕಾರ ನೀಡುವ ಮೂಲಕ ನಮ್ಮ ದೇಶದ ಜವಾನರು ಪ್ರತ್ಯುತ್ತರ ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ ಹೇಳಿದರು.ಅವರು ಹೆಜಮಾಡಿ ಜೂನಿಯರ್ ಕಾಲೇಜು ವಿಧ್ಯಾರ್ಥಿಗಳಿಂದ ಮಾನವ ಸರಪಳಿ ರಚಿಸಿ ದೇಶ ಭಕ್ತಿ ಗೀತೆ ಹಾಡುವ ಮೂಲಕ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ರವೀಂದ್ರನಾಥ ಜಿ ಹೆಗ್ಡೆ, ದಲಿತ ಮುಖಂಡಶೇಖರ ಹೆಜಮಾಡಿ, ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ್ ಕರ್ಕೇರ, ಕಾಲೇಜಿನ ಪ್ರಾಂಶುಪಾಲ ಮತ್ತು ಶಿಕ್ಷಕ ವೃಂದ ಭಾಗವಹಿಸಿದರು.

Related posts

Leave a Reply

Your email address will not be published. Required fields are marked *