Header Ads
Header Ads
Breaking News

ಹೆಜಮಾಡಿ ಅಮಾಸ್ಯೆ ಕರಿಯದಲ್ಲಿ ಎಳ್ಳಾಮಾಸ್ಯೆ ಪ್ರಯುಕ್ತ ಸಮುದ್ರ ಸ್ನಾನ

ಎಳ್ಳಾಮಾಸ್ಯೆಯ ಪ್ರಯುಕ್ತ ಹೆಜಮಾಡಿಯ ಅಮಾಸ್ಯೆ ಕರಿಯದಲ್ಲಿ ಸಮುದ್ರ ಸ್ನಾನಕ್ಕಾಗಿ ಜನ ಸಾಗರವೇ ಹರಿದು ಬಂದಿದ್ದು, ಸಮುದ್ರದ ಅಬ್ಬರದ ತೆರೆಗಳಲ್ಲೂ ಯಾವುದೇ ಅಂಜಿಕೆ ಇಲ್ಲದೆ ಸ್ನಾನಗಳನ್ನು ಪೂರೈಸುವ ಮೂಲಕ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾಂತಕವಾಗಿ ಮುಕ್ತಾಯ ಕಂಡಿದೆ.


ಈ ಬಾರಿ ಎಳ್ಳಾಮಾಸ್ಯೆ ಬಹಳ ಗೊಂದಲದಿಂದ ಕೂಡಿತ್ತು, ಒಂದು ಕಡೆ ಎರಡೆರಡು ದಿನ ಎಳ್ಳಾಮಾಸ್ಯೆಯಾದರೆ ಮತ್ತೊಂದು ಕಡೆ ದುರ್ನಾಥ ಮಿಶ್ರಿತ ಹಸುರು ನೀರು, ಈ ಎಲ್ಲದರ ಮಧ್ಯೆ ಈ ಬಾರಿಯ ಅಮಾವಾಸ್ಯೆ ಸಪ್ಪೆಯಾಗಲಿದೆ ಎಂದು ಬಾವಿಸಲಾಗಿದೆಯಾದರೂ, ಈ ಎರಡೂ ಕಾರಣಗಳು ಭಾನುವಾರದ ಸಮುದ್ರ ಸ್ನಾನಕ್ಕೆ ಅಡ್ಡಿಯಾಗಿಲ್ಲ, ಶನಿವಾರ ದಿನವೂ ಕೆಲ ಮಂದಿ ಹಸುರು ಮಿಶ್ರಿತ ನೀರಿನಲ್ಲೇ ಸಮುದ್ರ ಸ್ನಾ ಪೂರೈಸಿದರಾದರೂ, ಭಾನುವಾರ ಸಮುದ್ರದ ನೀರಿನ ಬಣ್ಣ ಸಹಜ ಸ್ಥಿತಿಗೆ ಮರಳಿದ್ದು ಸಹಸ್ರಾರು ಮಂದಿ ತೀರ್ಥ ಸ್ನಾನ ಪೂರೈಸಿದ್ದಾರೆ.
ಈ ಬಗ್ಗೆ ಮಾತನಾಡಿದ ಹೆಜಮಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ್ ಕರ್ಕೇರ, ಅಮಾವಾಸ್ಯೆ ಎರಡು ದಿನಗಳೆಂಬ ಗೊಂದಲ ವಿದ್ದರೂ ಶನಿವಾರ ಅಲ್ಪ ಸಂಖ್ಯೆ ಜನ ತೀರ್ಥ ಪೂರೈಸಿದ್ದು ಈ ದಿನ ಸಹಸ್ರಾರು ಸಂಖ್ಯೆಯಲ್ಲಿ ದೂರದ ಊರಿಂದಲೂ ಆಗಮಿಸಿ ತೀರ್ಥ ಸ್ನಾನ ಮಾಡಿದ್ದಾರೆ. ಅದಲ್ಲದೆ ಸಮುದ್ರದ ನೀರು “ಪೈ ನೀರ” ಸಮಸ್ಯೆಯಿಂದ ನಿನ್ನೆಯವರೆಗೂ ಹಸುರಾಗಿದ್ದರೂ ಈ ದಿನ ನಿಜ ಬಣ್ಣಕ್ಕೆ ತಿರುಗಿದೆ, ದೂರದ ಊರಿಂದ ಬರುವ ಮಹಿಳೆಯರಿಗೆ ಸ್ನಾನ ಪೂರೈಸಿ ಬಟ್ಟೆ ಬದಲಿಸುವುದಕ್ಕಾಗಿ ಸ್ಥಳೀಯ ವಿವಿಧ ಸಂಘಟನೆಗಳು ಪೆಂಢಲ್‌ಗಳನ್ನು ನಿರ್ಮಿಸಿದೆ, ಹಾಗೂ ಸುರಕ್ಷಿತೆಯ ದೃಷ್ಠಿಯಿಂದ ಯಂತ್ರ ಅಳವಡಿಸಿದ ದೋಣಿ ಸಮುದ್ರ ತೀರದಲ್ಲಿ ಸಂಚರಿಸಿ ಕಾವಲು ಕಾಯುವ ವ್ಯವಸ್ಥೆಯನ್ನೂ ಸ್ಥಳೀಯರು ಕಲ್ಪಿಸಿದ್ದಾರೆ. ಅದಲ್ಲದೆ ಪ್ರತೀ ವರ್ಷದಂತೆ ಈ ವರ್ಷವೂ ಮೃತರಾದ ತಮ್ಮವರ ಸದ್ಗತಿಗಾಗಿ ಪಿಂಡ ಪ್ರಧಾನ ಕಾರ್ಯವೂ ಸಮುದ್ರ ತೀರದೆಲ್ಲೆಡೆ ನಡೆಸುತ್ತಿದ್ದಾರೆ. ಎಂದಿಗಿಂತಲೂ ಈ ದಿನ ಸಮುದ್ರದ ತೆರೆಗಳ ಅಬ್ಬರ ಜಾಸ್ತಿಯಾಗಿದ್ದು, ಜನರ ಉತ್ಸಾಹವೂ ಹಿಮ್ಮಡಿಯಾಗಿದೆ. ಒಟ್ಟಿನಲ್ಲಿ ಯಾವುದೇ ಸಮಸ್ಯೆ ಉಂಟಾಗದೆ ಎಳ್ಳಾಮಾಸ್ಯೆ ತೀರ್ಥ ಸ್ನಾನ ನಡೆಯುತ್ತಿದೆ ಎಂದರು.
ಈ ಭಾಗದ ಜನರಿಗೆ ಈ ದಿನ ಹಬ್ಬದ ವಾತಾವರಣ ಸಮುದ್ರ ಸ್ನಾನಕ್ಕೆಂದು ಆಗಮಿಸುವ ನೆಂಟರಿಗೆ ಹಬ್ಬದ ಅಡುಗೆ ಬಡಿಸಿ ಖುಷಿ ಪಡುತ್ತಾರೆ. ಜಾತ್ರೆಯ ಮಾದರಿಯಲ್ಲಿ ನಡೆಯುವ ಈ ತೀರ್ಥ ಸ್ನಾನ ಪ್ರದೇಶವಾದ ಅಮಾಸ್ಯೆ ಕರಿಯದಲ್ಲಿ ವಿವಿಧ ಬಗ್ಗೆಯ ಸಂತೆಗಳು ಆಗಮಿಸಿ ಹಬ್ಬದ ಕಲೆಯನ್ನು ದ್ವಿಗುಣಗೊಳಿಸಿದೆ.

Related posts

Leave a Reply