Header Ads
Breaking News

ಹೆಜಮಾಡಿ ಕೋಡಿ ಸಮೀಪದಲ್ಲಿ “ಜನಹಿತ ವ್ಯಾಯಾಮ ಶಾಲೆ”ಯ ಶಿಲಾನ್ಯಾಸ

 ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ ಬಳಿ ಜನಹಿತ ವ್ಯಾಯಾಮ ಶಾಲೆಯ ಶಿಲಾನ್ಯಾಸ ಕಾರ್ಯಕ್ರಮ ಜರುಗಿತ್ತು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ಶಿಲಾನ್ಯಾಸ ನೆರೆವೇರಿಸಿದರು. ಈ ವೇಳೆ ಮಾತನಾಡಿದ ಅವರು, ವ್ಯಾಯಾಮದಿಂದಾಗಿ ನಾವು ಆರೋಗ್ಯವಾಗಿರಲು ಸಾಧ್ಯ, ವ್ಯಾಯಾಮ ಸರ್ವಾಂಗೀಣ ಬೆಳವಣಿಗೆ ಪೂರಕವಾಗುತ್ತದೆ ಎಂದು ಅವರು ಹೇಳಿದರು.

ಈ ವೇಳೆ ಜನಹಿತ ವ್ಯಾಯಾಮ ಶಾಲೆ ಜೀಣೋದ್ಧಾರ ಸಮಿತಿ ಗೌರವ ಅಧ್ಯಕ್ಷರಾದ ಸತೀಶ್ ಕೆ.ಕೋಟ್ಯಾನ್, ಉದ್ಯಮಿ ಸರೇಶ್ ಶೆಟ್ಟಿ ಗುರ್ಮೆ, ಜಿಲ್ಲಾ ಸಹಕಾರಿ ಒಕ್ಕೂಟ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು, ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ ಸೇರಿದಂತೆ ಮತ್ತಿತರರು ಉಪಸ್ಥತರಿದ್ದರು.

Related posts

Leave a Reply