Header Ads
Breaking News

ಹೆಜಮಾಡಿ ಗರೋಡಿಯಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ

ಕೋಟಿ ಚೆನ್ನಯರು ಹಾಗೂ ಕಾಂತಬಾರೆ ಬೂದಬಾರೆ ಮಧ್ಯೆ ಸಂಘರ್ಷ ನಡೆದು, ಆ ಬಳಿಕ ನಡೆದ ಹೊಂದಾಣಿಕೆಯಿಂದ ಹೆಜಮಾಡಿಯಲ್ಲಿ ಕೋಟಿ-ಚೆನ್ನಯರ ಗರೋಡಿ ನಿರ್ಮಾಣವಾಗಿದೆ ಎಂಬ ಇತಿಹಾಸ ಹೊಂದಿರುವ ಹೆಜಮಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ, ಈ ಜಾತ್ರೆಗೆ ಊರು ಹಾಗೂ ಹೊರ ಜಿಲ್ಲೆ ಸಹಿತ ಹೊರ ರಾಜ್ಯಗಳಿಂದ ಸಹಸ್ರಾರು ಮಂದಿ ಭಕ್ತ ಸಾಗರವೇ ಹರಿದು ಬಂದಿದೆ.

ವಾರ್ಷಿಕ ನೇಮೋತ್ಸವ ಸಂದರ್ಭ ಈ ಗರೋಡಿಯಲ್ಲಿ ಕಳೆದ 25 ವರ್ಷಗಳ ಹಿಂದೆ ಕಷ್ಟದ ಕಾಲದಲ್ಲೂ ಅನ್ನ ಪ್ರಸಾದ ಸೇವೆಯನ್ನು ಆರಂಭಿಸಿದ ಪ್ರಮುಖರನ್ನು ಗುರುತಿಸಿ ಗೌರವಿಸಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ಗರೋಡಿಯ ಪ್ರಧಾನ ಅರ್ಚಕ ಗುರುರಾಜ್ ಪೂಜಾರಿ, ಪ್ರತಿ ವರ್ಷದಂತ್ತೆ ಈ ಬಾರಿಯೂ ಬಹಳ ವಿಜ್ರಂಭಣೆಯಿಂದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಕ್ಷೇತ್ರಕ್ಕೆ ಕೇವಲ ಊರ ಭಕ್ತಾಧಿಗಳು ಮಾತ್ರವಲ್ಲ ದೇಶ ವಿದೇಶದಿಂದಲೂ ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಜಾತ್ರಾ ಸಂದರ್ಭದಲ್ಲಿ ಆಗಮಿಸುತ್ತಾರೆ. ಭಕ್ತಾಧಿಗಳ ಮೂಲಕ ಬಹಳಷ್ಟು ಅಭಿವೃದ್ಧಿಯನ್ನು ಕಾಣುತ್ತಿರುವ ಈ ಗರೋಡಿ ಭಕ್ತರ ಭಕ್ತಿ ಹಾಗೂ ಬ್ರಹ್ಮ ಬೈದರ್ಕಳ ಶಕ್ತಿ ಕೇಂದ್ರವೂ ಹೌದೆನ್ನುತ್ತಾರೆ.

Related posts

Leave a Reply

Your email address will not be published. Required fields are marked *