Header Ads
Header Ads
Breaking News

ಹೆಜಮಾಡಿ ಗ್ರಾ. ಪಂ.ಗೆ ಹೊಸ ಕಟ್ಟಡ, ಮಾಜೀ ಮಂತ್ರಿ ಸೊರಕೆಯವರಿಂದ ಅಡಿಗಲ್ಲು

ಹೆಜಮಾಡಿ ಗ್ರಾ.ಪಂ.ಗೆ ಸತತ ೧೦ನೇ ಬಾರಿ ತಾನು ಭೇಟಿ ನೀಡಿದ್ದು ತನ್ನ ಶಾಸಕತ್ವದ ಅವಧಿಯಲ್ಲಿ ೨೧ ಕೋಟಿ ರೂ.ಗಳನ್ನು ಹೆಜಮಾಡಿಯ ಗ್ರಾಮಾಭಿವೃದ್ಧಿಯ ವಿವಿಧ ಕಾಮಗಾರಿಗಳಿಗಾಗಿ ವಿನಿಯೋಗಿಸಲಾಗಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಸುಮಾರು ೮೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಜಮಾಡಿ ಗ್ರಾ. ಪಂ. ನೂತನ ಕಟ್ಟಡದ ಶಿಲಾನ್ಯಾಸಗೈದು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಜಮಾಡಿ ಬಂದರು ಯೋಜನೆಗಾಗಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ರವಾನಿಸಲಾಗಿದೆ. ಕ್ರೀಡಾ ಇಲಾಖೆಯಿಂದ ರಾಜೀವ್ ಗಾಂಧಿ ತಾ. ಕ್ರೀಡಾಂಗಣದ ಸ್ಟೇಡಿಯಂ ರಚನೆಗಾಗಿ ೩ ಕೋಟಿ ರೂ. ಬಿಡುಗಡೆಯಾಗಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೂ ಶೀಘ್ರವೇ ಅನುಷ್ಟಾನಗೊಳ್ಳಲಿರುವುದಾಗಿ ಶಾಸಕ ಸೊರಕೆ ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವಿಕೇಂದ್ರೀಕರಣದಡಿಯಲ್ಲಿ ಗ್ರಾ. ಪಂ. ವ್ಯವಸ್ಥೆಯಲ್ಲಿ ಮೀಸಲಾತಿಯನ್ನು ತರುವುದರೊಂದಿಗೆ ಸರಕಾರವು ಮಹಿಳೆಯರಿಗೂ ಗ್ರಾಮಾಭಿವೃದ್ಧಿಯಲ್ಲಿ ಪಾಲುದಾರರಾಗುವ ಅವಕಾಶಗಳು ಲಭ್ಯವಾಗಿವೆ ಎಂದರು. ಜಿ. ಪಂ. ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿದರು. ವೇದಿಕೆಯಲ್ಲಿ ತಾ. ಪಂ. ಸದಸ್ಯೆ ರೇಣುಕಾ ಪುತ್ರನ್, ಮಾಜಿ ತಾ. ಪಂ. ಸದಸ್ಯರಾದ ನವೀನ್ಚಂದ್ರ ಜೆ. ಶೆಟ್ಟಿ, ನಾರಾಯಣ ಪೂಜಾರಿ, ಕೆ‌ಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಪಂಚಾಯತ್ ರಾಜ್ ಎಂಜೀನಿಯರ್ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು. ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

Related posts

Leave a Reply