
ಗಬ್ಬೆದ್ದು ನಾರುತ್ತಿದ್ದ ಹೆಜಮಾಡಿ ಟೋಲ್ ಗೇಟ್ ಪರಿಸರವನ್ನು ಆಪತ್ತ್ ಬಾಂಧವ ಆಸೀಪ್ ನೇತ್ರತ್ವದಲ್ಲಿ ಮುಲ್ಕಿ ಮೈಮುನಾ ಫೌಂಡೇಶನ್ ನ ಆಪತ್ ಬಾಂಧವರು ಸ್ವಚ್ಚತೆ ಮಾಡುವ ಮೂಲಕ ಎಲ್ಲಾ ಸರಿ ಇದ್ದು ಯಾವುದು ಸರಿ ಇಲ್ಲದಂತೆ ವರ್ತಿಸುವವರಿಗೆ ಮಾದರಿ ಎಣಿಸಿದ್ದಾರೆ.
ಟೋಲ್ ಗೇಟ್ ಬಳಿ ಕಾರ್ಯಚರಿಸುತ್ತಿರುವ ಗೂಡಂಗಡಿಗಳ ಹಿಂಭಾಗದಲ್ಲಿ ರಾಶಿ ಬಿದ್ದ ದುರ್ನಾತ ತ್ಯಾಜ್ಯಗಳಲ್ಲಿ ಹುಳಗಳಾಗಿ ಮಾರಾಕ ರೋಗಭೀತಿ ಇದ್ದು, ಅಂಥಹ ತ್ಯಾಜ್ಯಗಳನ್ನು ಸ್ವಚ್ಚ ನಡೆಸುವ ಮೂಲಕ ಈ ತ್ಯಾಜ್ಯ ಸೃಷ್ಟಿ ದವರ ಕಣ್ಣು ತೆರೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಆಪತ್ತ್ ಬಾಂಧವ ಆಸೀಪ್, ಸಮಾಜದಲ್ಲಿ ಕಸದಂತ್ತಿದ್ದು ಇದೀಗ ನಮ್ಮ ಸಂಸ್ಥೆಯ ಆರೈಕೆಯಲ್ಲಿ ಸುಮಾರು ಮೂವತ್ತು ಮಂದಿ ಹೆಜಮಾಡಿ ಟೋಲ್ ಗೇಟ್ ಪರಿಸರವನ್ನು ಸ್ವಚ್ಚಗೊಳಿಸುವ ಮೂಲಕ ಇತರರ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ನಮ್ಮ ದೇಶದ ಬೃಹತ್ ಸಮಸ್ಯೆಗಳಲ್ಲಿ ಒಂದಾಗಿರುವ ಈ ತ್ಯಾಜ್ಯ ಸಮಸ್ಯೆಯ ಬಗ್ಗೆ ಜನರು ಇನ್ನಾದರೂ ಎಚ್ಚರಗೊಳ್ಳುವ ಅಗತ್ಯವಿದೆ ಎಂದರು.