Header Ads
Header Ads
Breaking News

ಹೆಜಮಾಡಿ ಟೋಲ್ ಗೇಟ್ ನಿರ್ಧಾರ ನನ್ನ ಕೈಯಲ್ಲಿಲ್ಲ : ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಪಷ್ಟನೆ

ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಿ ವಿರೋಧಿಸಿ ಕಳೆದ 24 ದಿನಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪ್ರತಿಭಟನಾ ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರು ಹೆಜಮಾಡಿ ಟೋಲ್‍ಗೇಟ್ ನಿರ್ಧಾರ ನನ್ನ ಕೈಯಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅವರು ಪಡುಬಿದ್ರಿ ಟೆಂಪೋ ನಿಲ್ದಾಣದಲ್ಲಿ ಕಳೆದ 24 ದಿನಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ಹೆಜಮಾಡಿ ಟೋಲ್ ವಿರುದ್ಧದ ಹೋರಾಟ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಗಾರರ ನೋವಿನ ನುಡಿಗಳನ್ನು ಆಲಿಸಿ ಮಾತನಾಡಿದರು. ಪ್ರತಿಭಟನಾ ನಿರತರ ಮಾತಿನಂತೆ ನಮ್ಮ ಜಿಲ್ಲೆಯಲ್ಲಿ ಎರಡು ಟೋಲ್‍ಗೇಟ್‍ಗಳಿದ್ದು, ಒಂದರಲ್ಲಿ ಸ್ಥಳೀಯರಿಗೆ ಉಚಿತ ಮತ್ತೊಂದರಲ್ಲಿ ಸ್ಥಳೀಯರಲ್ಲಿ ವಸೂಲಿ ಈ ಇಬ್ಬಗೆ ನೀತಿ ಸರಿಯಲ್ಲ, ಸಾಸ್ತಾನದಲ್ಲಿ ಸ್ಥಳೀಯರಿಗೆ ಟೋಲ್ ಫ್ರೀ ಯಾಗಿದ್ದು ಹೆಜಮಾಡಿಯಲ್ಲೂ ಅದನ್ನು ಅದೇ ಮಾದರಿಯನ್ನು ಅನುಸರಿಸಿ ಎಂಬುದು ಸರಿಯಾಗಿಯೇ ಇದೆ, ಈ ಬಗ್ಗೆ ನವಯುಗ್ ಕಂಪನಿಯ ಮುಖ್ಯಸ್ಥರ ಗಮನಕ್ಕೆ ತರಲಾಗಿದೆಯಾದರೂ ಪೂರಕ ಉತ್ತರ ದೊರೆತ್ತಿಲ್ಲ, ಇಲ್ಲಿನ ವಾಸ್ತವ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಹೋರಾಟಗಾರರಾದ ನಿಮ್ಮ ಬೇಡಿಕೆ ಈಡೇಸಲು ಯತ್ನಿಸುವೆ, ಆ ವರಗೆ ನಿಮ್ಮ ಹೋರಾಟವನ್ನು ಕೈ ಬಿಡುವಂತ್ತೆ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.

ಕಳೆದ 24 ದಿನಗಳಿಂದ ಜಿಲ್ಲಾಢಳಿತ, ನವಯುಗ್ ಕಂಪನಿ ಸಹಿತ ಸರ್ಕಾರ ಗಮನ ಸೆಳೆಯಲು ವಿವಿಧ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದೇವೆ. ಆದರೆ ಯಾರಿಂದಲೂ ನಮಗೆ ಪೂರಕ ಭರವಸೆ ದೊರೆತಿಲ್ಲ. ಇಂದು ಕೊನೆಯದಾಗಿ ಕೇಶ ಮುಂಡನ ಮಾಡಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತತಿಭಟನೆ ನಡೆಸಿದ್ದೇವೆ.. ಇದಕ್ಕೂ ನಮಗೆ ಯಾವುದೇ ಸ್ಪಂಧನೆ ದೊರಕದಿದ್ದಲ್ಲಿ ಉಗ್ರ ಹೋರಾಟ ನಡೆಸು ನಿರ್ಧಾರ ಕೈಗೊಂಡಿದ್ದೇವೆ ಕರ್ನಾಟಕ ರಕ್ಷಣಾ ವೇದಿಕೆಯ ಪಧಾಧಿಕಾರಿ ಆಸೀಫ್ ಆಫತ್ತ್ ಬಾಂಧವ ಎಚ್ಚರಿಸಿದ್ದಾರೆ.

ಟೋಲ್ ರಕ್ಷಣೆ ಹಿಂಪಡೆಯಿರಿ: ಟೋಲ್‍ಗೇಟ್‍ಗೆ ಹಾಕಿದ ಪೊಲೀಸ್ ರಕ್ಷಣೆ ಹಿಂದೆ ಪಡೆಯಿರಿ, ನವಯುಗ್ ಕಂಪನಿಯ ಅಧಿಕಾರಿಯಾಗಿದ್ದು ಕೊಂಡು, ಇಲ್ಲಿನ ಜನರ ನೈಜ್ಯ ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಮೇಲಾಧಿಕಾರಿಗಳ ದಾರಿ ತಪ್ಪಿಸುತ್ತಿದ್ದ ಶಂಕರ್ ರಾವ್ ಗೆ ತಕ್ಕ ಪಾಠ ನಾವೇ ಕಲಿಸುತ್ತೇವೆ ಎಂಬುದಾಗಿ ಹೋರಾಟಗಾರ ನವೀನ್‍ಚಂದ್ರ ಜೆ. ಶೆಟ್ಟಿ ಎಚ್ಚರಿಸಿದ್ದಾರೆ.

ಆ ಬಳಿಕ ಜಿಲ್ಲಾಧಿಕಾರಿಯವರಲ್ಲಿ ಪಡುಬಿದ್ರಿ ಪೇಟೆಯಲ್ಲಿನ ಅರೆಬರೆ ಹೆದ್ದಾರಿ ಕಾಮಗಾರಿಯಿಂದಾಗ ನಡೆಯುತ್ತಿರುವ ಅಪಘಾತಗಳು ಪ್ರಾಣಹಾನಿಗಳ ಬಗ್ಗೆ ಹಾಗೂ ಸರ್ವಿಸ್ ರಸ್ತೆ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಯಾವತ್ತೂ ಇಲ್ಲದ ಧೂಳಿನ ರಕ್ಷಣೆಗಾಗಿ ನೀರು ಚುಮ್ಮಿಸುವ ಕಾರ್ಯವನ್ನು ನವಯುಗ್ ಕಂಪನಿಯವರು ನಡೆಸಿದಾಗ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಾರ್ವಜನಿಕರು ನವಯುಗ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Related posts

Leave a Reply