Header Ads
Header Ads
Breaking News

ಹೆಜಮಾಡಿ ಟೋಲ್ ಗೇಟ್ ಬಳಿ ಬುಲೆಟ್ ಬೆಂಕಿಗಾಹುತಿ

ಬುಲೆಟ್ ದ್ವಿಚಕ್ರ ವಾಹನವೊಂದು ಚಾಲನೆಯಲ್ಲಿ ಇರುತ್ತಿದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸುಟ್ಟು ಹೋದ ಘಟನೆ ಹೆಜಮಾಡಿ ಟೋಲ್‌ಗೇಟ್ ಬಳಿ ನಡೆದಿದೆ.ಕೇರಳ ನೊಂದಣಿ ಸಂಖ್ಯೆಯ ಈ ಬುಲೆಟ್ ಸವಾರ ಪೆಬ್ಬಿನ್ ಗೋವಾಕ್ಕೆ ಪ್ರವಾಸ ಹೋಗಿ ಕೇರಳಕ್ಕೆ ಮರಳುತ್ತಿದ್ದು, ಪಡುಬಿದ್ರಿಯ ಪೆಟ್ರೋಲ್ ಬಂಕಿನಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ನಾಲ್ಕು ಕೀ.ಮೀ. ಸಾಗುವಷ್ಟರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ಬುಲೆಟ್ ನಿಲ್ಲಿ ಸಿ ಹಾರಿದ ತಕ್ಷಣ ಬೆಂಕಿ ತೀವೃ ಸ್ವರೂಪ ಪಡೆದಿದ್ದು, ಬಹುತೇಕ ಸುಟ್ಟು ಹೋಗಿದೆ. ಅದರೊಂದಿಗೆ ಬುಲೆಟ್‌ಗೆ ಕಟ್ಟಲಾಗಿದ್ದ ಬ್ಯಾಗ್ ಕೂಡಾ ಸಂಪೂರ್ಣ ಸುಟ್ಟು ಹೋಗಿದ್ದು, ಅದರಲ್ಲಿದ್ದ ಬಟ್ಟೆ ಸಹಿತ ಎಟಿಎಂ ಕಾರ್ಡ್ ನಗದು ಕೂಡ ಸುಟ್ಟು ಕರಕಲಾಗಿದೆ. ಅದೇ ಹೊತ್ತಲ್ಲಿ ಟ್ಯಾಂಕರೊಂದಕ್ಕೆ ಟೋಲ್ ಬಳಿ ನೀರು ತುಂಬಿಸಿಕೊಳ್ಳುತ್ತಿದ್ದು, ಅದೇ ಟ್ಯಾಂಕರಿಂದ ಬೆಂಕಿ ನಂದಿಸಲಾಯಿತಾದರೂ ಅಷ್ಟರಲ್ಲೇ ಭಾಗಶಃ ಸುಟ್ಟು ಹೋಗಿದೆ. ಈ ಸಂದರ್ಭ ಟೋಲ್ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮಿಸಿದ್ದಾರೆ.

Related posts

Leave a Reply