Header Ads
Header Ads
Breaking News

ಹೆಜಮಾಡಿ ಟೋಲ್ ಬಳಿ ಪ್ರತಿಭಟನೆ,ಜಿಲ್ಲಾಡಳಿತಕ್ಕೆ ಮೂರು ದಿನಗಳ ಗಡುವು ತಪ್ಪಿದ್ದಲ್ಲಿ ಉಗ್ರ ಹೋರಾಟ:ಪ್ರತಿಭಟನಾಕಾರರಿಂದ ಮನವಿ

ಉಚಿತ ಟೋಲ್ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತ್ತೆ ಆಗ್ರಹಿಸಿ ಸುಮಾರು 200 ಮಂದಿ ಹೆಜಮಾಡಿ ಟೋಲ್ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕಾಪು ಕಂದಾಯ ಅಧಿಕಾರಿಯ ಮುಖಾಂತರ ಪ್ರತಿಭಟನಾಗಾರರು ಮನವಿ ನೀಡಿದರು. ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಮೂರು ದಿನಗಳಲ್ಲಿ ಸ್ಪಂಧಿಸದಿದ್ದಲ್ಲಿ ಅವಳಿ ಜಿಲ್ಲೆಗಳ ಸಹಸ್ರಾರು ಮಂದಿ ಸೇರಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.ಹೋರಾಟ ಸಮಿತಿಯ ಪ್ರಮುಖರ ಗೈರು ಹಾಜರಿಯಲ್ಲಿ ಹೆಜಮಾಡಿ ಟೋಲ್‌ಗೇಟ್ ಹಾಗೂ ರಾಷ್ಟ್ರೀಯ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಹುತೇಕ ಮುಲ್ಕಿ ಪರಿಸರದ ಜನರೇ ಇದ್ದು, ಸ್ಥಳೀಯರ ಗೈರು ಹಾಜರು ಎದ್ದು ಕಾಣುತ್ತಿತ್ತು. ಹೋರಾಟಗಾರ ಸಿದ್ಧಕ್ ತಲಪಾಡಿ ಮಾತನಾಡಿ..ಯಾವ ಭಾಗದಲ್ಲಿ ಜನರ ವಿರೋಧ ಕಡಿಮೆ ಇದೆಯೋ ಆ ಭಾಗದಲ್ಲಿ ನವಯುಗ್ ಕಂಪನಿ ಸಹಿತ ಹೆದ್ದಾರಿ ಪ್ರಧಿಕಾರ ತಮ್ಮ ಪ್ರಭಾವವನ್ನು ಬಳಸಿ ಜನರಿಂದ ಹಗಲು ದರೋಡೆ ನಡೆಸುತ್ತಿದ್ದಾರೆ. ತಲಪಾಡಿ ಸಹಿತ ಸಾಸ್ತನಗಳಲ್ಲಿ ನಮ್ಮ ಹೋರಾಟದ ಫಲವಾಗಿ ಸುತ್ತಲ ವಾಹನಗಳಿಗೆ ಟೋಲ್ ಫ್ರೀ ಇದೆ. ಆದರೆ ಹೆಜಮಾಡಿಯಲ್ಲಿ ಮಾತ್ರ ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳ ಬೇಕಾಗಿದೆ. ಹೆಜಮಾಡಿ ಭಾಗದ ಒಂದಿಷ್ಟು ಮಂದಿಗೆ ಟೋಲ್ ಉಚಿತಗೊಳಿಸಿ ಯಾಮಾರಿಸಿರ ಬಹುದು ಇದು ಕೇವಲ ತಾತ್ಕಾಲಿಕ, ಮುಂದಿನ ದಿನದಲ್ಲಿ ಮತ್ತೆ ಸ್ಥಳೀಯರಿಗೂ ಟೋಲ್ ಹೇರುತ್ತಾರೆ ಆ ಸಂದರ್ಭ ಹೋರಾಟದಲ್ಲಿ ನಿಮಗೆ ಬೆಂಬಲಿಸುವವರೇ ಇಲ್ಲ ವಾಗುತ್ತೆ. ಆ ನಿಟ್ಟಿನಲ್ಲಿ ಇದೀಗಲೇ ತಮ್ಮ ಹಕ್ಕಿಗಾಗಿ ಪ್ರತಿಭಟನೆ ಅನಿವಾರ್ಯ ಎಂದರು. ಜಿಲ್ಲಾಢಳಿತ ಸರ್ಕಾರ ಸೂಚಿಸಿದೆ ಎಂಬುದಾಗಿ ಟೋಲ್‌ಗೇಟ್ ಬೆಂಬಲಕ್ಕೆ ನಿಂತಿದೆ, ಅದೇ ಜನ ಸಾಮಾನ್ಯರಾದ ನಮ್ಮ ಹಕ್ಕನ್ನು ಪಡೆಯುವುದಕ್ಕೆ ಯಾರು ಬೆಂಬಲ ನೀಡಬೇಕು..? ಇದಕ್ಕೆ ಜಿಲ್ಲಾಧಿಕಾರಿಗಳೇ ಉತ್ತರಿಸ ಬೇಕೆಂದರು.

ಪ್ರತಿಭಟನಾಗಾರರ ಪ್ರಮುಖ ಬೇಡಿಕೆಗಳಾದ ಹೆಜಮಾಡಿ ಟೋಲ್ ಪ್ಲಾಝಾದ ಸುತ್ತಲ ಐದು ಕೀ.ಮೀ. ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಫಲಿಮಾರು, ಮುಲ್ಕಿ, ಹಳೆಯಂಗಡಿ ವ್ಯಾಪ್ತಿಯ ವಾಹನಗಳಿಗೆ ಟೋಲ್‌ಗೇಟ್‌ನಲ್ಲಿ ಉಚಿತ ಪ್ರಯಾಣ ನೀಡ ಬೇಕು, ಕಣ್ಣಂಗಾರ್ ಬಳಿ ವಾಹನಗಳು ಅನಿರ್ವಾಯ ಸ್ಥಿತಿಯಲ್ಲಿ ವಿರುದ್ಧ ದಿಕ್ಕಿನಿಂದ ಅಪಾಯಕಾರಿಯಾಗಿ ಸಂಚರಿಸುತ್ತಿದ್ದು, ಆ ಭಾಗದಲ್ಲಿ ಆರು ನೂರು ಮೀಟರ್ ಸರ್ವಿಸ್ ರಸ್ತೆ ನಿರ್ಮಾಣ, ಹೆಜಮಾಡಿ ಶಿವನಗರ ಬಳಿ ಸ್ಕೈ ವಾಕ್ ನಿರ್ಮಾಣ, ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಟೋಲ್ ಪ್ಲಾಝದ ಎಲ್ಲಾ ಗೇಟ್‌ಗಳು ಸದಾ ಹೊತ್ತು ತೆರೆದಿರಿಸ ಬೇಕು, ಅಲ್ಲದೆ ಟೋಲ್ ಪ್ಲಾಝದಲ್ಲಿ ಮೂಲಭೂತ ಸೌಕರ್ಯ ಒದಗಿಸ ತಕ್ಕದ್ದು, ಉಭಯ ಜಿಲ್ಲೆಯಲ್ಲಿ ಬಾಕಿಯಾದ ಕಾಮಗಾರಿ ಸಹಿತ ಮುಖ್ಯವಾಗಿ ಸರ್ವಿಸ್ ರಸ್ತೆಯನ್ನು ಪೂರ್ಣಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮಹಿಳಾ ಶೌಚಾಲಯಕ್ಕಿಲ್ಲ ಬಾಗಿಲು: ಕಳೆದ ಸುಮಾರು ಒಂದು ವರ್ಷಗಳಿಂದ ಟೋಲ್‌ಗೇಟ್ ಬಳಿ ನಿರ್ಮಿಸಲಾದ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬಾಗಿಲೇ ಇಲ್ಲದೆ ಶೌಚಾಕ್ಕೆ ಬರುವ ಮಹಿಳೆಯರು ಮುಜುಗರ ಅನುಭವಿಸುವಂತ್ತಾಗಿದ್ದು, ಒಬ್ಬರು ಒಳ ಹೋದರೆ ಮತ್ತೋರ್ವರು ಬಾಗಿಲು ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಟೋಲ್‌ಗೇಟ್ ನಿರ್ವಾಹಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರತಿಭಟನಾಗಾರರು. ಈ ಸಂಧರ್ಭ ಹೋರಾಟಗಾರ ಪ್ರಮುಖರಾದ ಗುಲಾಂ ಮಹಮ್ಮದ್, ಶೇಖರ್ ಹೆಜಮಾಡಿ, ಮಧು ಆಚಾರ್ಯ, ವಿಶ್ವಾಸ್ ಅಮೀನ್ ಮುಂತಾದವರಿದ್ದರು.

Related posts

Leave a Reply