Header Ads
Header Ads
Header Ads
Breaking News

ಹೆಜಮಾಡಿ ದೇವಳದಲ್ಲಿ ಗ್ರಹಣ ಶಾಂತಿ ಹೋಮ

ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಹಣ ದೋಷ ಪರಿಹಾರ್ಥವಾಗಿ ಅರ್ಚಕ ಪದ್ಮನಾಭ ಭಟ್ ನೇತ್ರತ್ವದಲ್ಲಿ ಗ್ರಹಣ ಶಾಂತಿ ಹೋಮ ಶ್ರೀ ಕ್ಷೇತ್ರದಲ್ಲಿ ನಡೆಯಿತು.ಈ ಬಗ್ಗೆ ವಿ4 ನ್ಯೂಸ್‌ಗೆ ಮಾಹಿತಿ ನೀಡಿದ ಶ್ರೀ ಹರಿ ಭಟ್, ಪ್ರಪಂಚಕ್ಕೆ ಬೆಳಕು ನೀಡುವ ಸೂರ್ಯ ದೇವರಿಗೆ ಗ್ರಹಣ ಬಾಧಿಸಿದ ಹಿನ್ನಲೆಯಲ್ಲಿ ಗ್ರಾಮಕ್ಕೆ ಒದಗ ಬಹುದಾದ ಅನಿಷ್ಟವನ್ನು ನಿವಾರಣೆ ಮಾಡುವುದಕ್ಕಾಗಿ ದೇವಳದ ಆಡಳಿತ ಸಮಿತಿಯ ಸೂಚನೆಯಂತೆ ಶ್ರೀ ಕ್ಷೇತ್ರದಲ್ಲಿ ಗ್ರಹಣ ಶಾಂತಿ ನಡೆಸುವ ಮೂಲಕ ಗ್ರಾಮದ ಸುಭೀಕ್ಷೆಗಾಗಿ ಗ್ರಾಮ ದೇವರಾದ ಶ್ರೀ ಮಹಾಲಿಂಗೇಶ್ವರ ನಲ್ಲಿ ಪ್ರಾರ್ಥಿಸಲಾಯಿತು ಎಂದರು.ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಉಪಾಧ್ಯಕ್ಷರುಗಳಾದ ಸುಧಾಕರ ಕರ್ಕೇರ, ದಿನರಾಜ್ ಬಂಗೇರ, ಹರೀಶ್ ದೇವಾಡಿಗ, ಗುತ್ತಿನಾರ್ ಅರುಣ್ ಶೆಟ್ಟಿ ಮತ್ತಿತರಿದ್ದರು.

Related posts

Leave a Reply

Your email address will not be published. Required fields are marked *