Header Ads
Breaking News

ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯಿಂದ ಸಮಾಜಮುಖಿ ಕಾರ್ಯಕ್ಕೆ ಚಾಲನೆ

ಕಳೆದ ಹನ್ನೊಂದು ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದು, ಇದೀಗ ನೂತನ ಸಮಿತಿ ರಚನೆಯಾಗಿ ಬಹಳಷ್ಟು ಉತ್ಸಾಹದಿಂದ ಸಮಜೋಮುಖಿ ಕಾರ್ಯದತ್ತ ಚಿತ್ತ ಹರಿಸಿದ, ಹೆಜಮಾಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಸುಧಾಕರ್ ಕರ್ಕೇರ ನೇತೃತ್ವದ ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿ ತಮ್ಮ ಪ್ರಥಮ ಕಾರ್ಯ ಹೆಜಮಾಡಿ ಬೈಪಾಸ್ ಬಳಿ ಅಪಘಾತ ನಿಯಂತ್ರಸಲು ಹೆದ್ದಾರಿಗೆ ಬ್ಯಾರಿಕೇಡ್ ಅಳವಡಿಸುವ ಕಾರ್ಯಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಿದ್ದೇವೆ ಎಂಬುದಾಗಿ ಸಮಿತಿ ಅಧ್ಯಕ್ಷ ಸುಧಾಕರ್ ಕರ್ಕೇರ ಹೇಳಿದ್ದಾರೆ.

ಅವರು ಹೆಜಮಾಡಿ ಸರ್ಕಾರಿ ಶಾಲಾ ಸಭಾಂಗಣದಲ್ಲಿ ನಡೆದ ಕ್ರಿಯಾ ಸಮಿತಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಹೆಜಮಾಡಿ ಬೈಪಾಸ್ ಬಳಿ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸರ್ವಿಸ್ ರಸ್ತೆ ಇಲ್ಲದೆ ಶಾಲಾ ವಾಹನ, ಖಾಸಗಿ ಬಸ್‍ಗಳು ಸಹಿತ ಎಲ್ಲಾ ವಾಹನಗಳು ಅನಿರ್ವಾಯವಾಗಿ ವಿರುದ್ಧ ದಿಕ್ಕಿನಿಂದ ಅಪಾಯಕಾರಿಯಾಗಿ ಸಂಚರಿಸುತ್ತಿದ್ದು, ನಿತ್ಯ ಅಪಘಾತಗಳು ಸಂಭವಿಸುತ್ತಿರುವುದನ್ನು ಮನಗಂಡು, ತಾತ್ಕಾಲಿಕ ಪರಿಹಾರ ಎಂಬಂತ್ತೆ ಈ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಕೆಯ ಕಾರ್ಯಕ್ಕೆ ಶನಿವಾರ ಬೆಳಿಗ್ಗೆ 9ಕ್ಕೆ ಗಣ್ಯತೀ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಿದ್ದೇವೆ. ಅದಲ್ಲದೆ ಅದೇ ದಿನ ಸಂಜೆ 4-30ರ ಸುಮಾರಿಗೆ ಕಳೆದ ಬಾರಿ ಕೊರೋನಾ ಸಂದರ್ಭ ಜೀವದ ಹಂಗು ತೊರೆದು ದುಡಿದ ಆಶಾ ಕಾರ್ಯಕರ್ತೆಯರು ಸಹಿತ ಇತರೆ ಕೊರೋನಾ ವಾರಿಯರಸ್‍ಗಳನ್ನು ಹಾಗೂ ನೂತನವಾಗಿ ಆಯ್ಕೆಯಾದ ಗ್ರಾ.ಪಂ. ಪ್ರತಿನಿಧಿಗಳನ್ನು ಮತ್ತು ಇತರೆ ಅರ್ಹ ವ್ಯಕ್ತಿಗಳನ್ನು ಸನ್ಮಾಸಿ ಗೌರವಿಸುವ ಮೂಲಕ ಅವರಿಂದ ಸಮಾಜಕ್ಕೆ ಮತ್ತಷ್ಟು ಕೊಡುಗೆಗಳನ್ನು ಪಡೆಯುವ ಇರಾದೆ ನಮ್ಮದೆಂದರು. ಈ ಸಂದರ್ಭ ಸಮಿತಿಯ ಪ್ರಮುಖರಾದ ಸನ ಹಿಬ್ರಾಹಿಂ, ವಿಶಾಲಾಕ್ಷೀ ಪುತ್ರನ್, ಪಾಂಡುರಂಗ ಕರ್ಕೇರ, ಸುಭಾಸ್ ಸಾಲ್ಯಾನ್, ಸಂಜೀವ ಟಿ., ರೇಶ್ಮಾ ಮೆಂಡನ್ ಹಾಗೂ ವಿಜಯ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *