Header Ads
Header Ads
Breaking News

ಹೆಜಮಾಡಿ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ನೇಮೋತ್ಸವ ಸಂಭ್ರಮ

ಪಡುಬಿದ್ರಿ ಸಮೀಪದ ಹೆಜಮಾಡಿ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ನೇಮೋತ್ಸವ ಬಹಳ ವಿಜ್ರಂಭಣೆಯಿಂದ ನಡೆಯಿತು. ಸಹಸ್ರಾರು ಭಕ್ತಾಧಿಗಳ ಸಂಗಮ ಕ್ಷೇತ್ರವಾಗಿ ಮೂಡಿ ಬಂದಿದೆ ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ. ಊರ ಪರವೂರಿನ ಭಕ್ತರು ಶ್ರೀ ಕ್ಷೇತ್ರಕ್ಕೆ ಬಂದು ದೇವರ ಗಂಧ ಪ್ರಸಾಧವನ್ನು ಸ್ವೀಕರಿಸಿದರು.

ಕಳೆದ ಜ.8ರಂದು ಗರೋಡಿ ಪ್ರವೇಶದೊಂದಿಗೆ ಈ ವರ್ಷದ ವಾರ್ಷಿಕ ಜಾತ್ರೆಗೆ ಚಾಲನೆ ದೊರಕಿದೆ, 9 ರಂದು ರಾತ್ರಿ ಅನ್ನ ನೈವೇದ್ಯ ಭಕ್ತಾಧಿಗಳ ಸಮ್ಮುಖದಲ್ಲಿ ನಡೆದಿದೆ. 10ರಂದು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ಹಾಗೂ 11ರಂದು ಶ್ರೀದೇವಿ ಮಯಾಂದಾಲೆಯ ನೇಮ ಹಾಗೂ ಮರುದಿನ ನಡೆಯುವ ಶುದ್ಧದಗೇಲ್ ನೊಂದಿಗೆ ಈ ವಾರ್ಷಿಕ ನೇಮೋತ್ಸವಕ್ಕೆ ತೆರೆ ಬೀಳಲಿದೆ.

ಈ ಬಗ್ಗೆ ಮಾತನಾಡಿದ ಗರೋಡಿಯ ಪ್ರಧಾನ ಅರ್ಚಕ ಗುರುರಾಜ್ ಪೂಜಾರಿ, ತುಳುನಾಡ ಅವಳಿ ಅವತಾರ ಪುರುಷರಾದ ಕೋಟಿ-ಚೆನ್ನಯರು ಹಾಗೂ ಕಾಂತಬಾರೆ-ಬೂದಬಾರೆ ಮಧ್ಯೆ ಭೂ ವಿಚಾರದಲ್ಲಿ ಸಂರ್ಘಷ ಏರ್ಪಟ್ಟಾಗ ಪ್ರತ್ಯಕ್ಷರಾದ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ, ಅವಳಿ ವೀರ ಪುರುಷರನ್ನು ಸಮಾದಾನಿಸಿ ತುಳುನಾಡಲ್ಲಿ ಅವರ ಆರಾಧನೆ ಹೇಗೆ ಎಲ್ಲಿ ಎಂಬುದನ್ನು ನಿರ್ಧಾರಪಡಿಸಿದ ಮೇರೆಗೆ, ಇಲ್ಲಿ ಕೋಟಿ ಚೆನ್ನಯರ ಆರಾಧನೆಗಾಗಿ ನಿರ್ಮಾಣಗೊಂಡ ಗರೋಡಿಯೇ ಈ ಹೆಜಮಾಡಿ ಗರೋಡಿ, ಇಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆದರೂ ವಾರದ ಎರಡು ದಿನ ಮಂಗಳವಾರ ಹಾಗೂ ಶುಕ್ರವಾರ ಮತ್ತು ತಿಂಗಳ ಸಂಕ್ರಮಣದಂದ್ದು ವಿಶೇಷ ಪೂಜೆಗಳು ನಡೆಯುತ್ತಿದೆ.

ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಹೆಜಮಾಡಿ ಬಿಲ್ಲವರ ಸಂಘದ ಆಡಳಿತ ಸಮಿತಿಯ ಉಸ್ತುವಾರಿಯಲ್ಲಿಯೇ ನಡೆಯುವ ಈ ನೇಮೋತ್ಸವ ಊರ ಜಾತ್ರೆಯಂತೆ ನಡೆಯುತ್ತಿದ್ದು, ಜಾತಿ-ಧರ್ಮ ಬೇಧ ಮರೆತು ಈ ಪುಣ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೋಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಪೂಜಾರಿ, ಹೆಜಮಾಡಿ ಮಹಾಲಿಂಗೇಶ್ವರ ದೇವಳದ ಮೋಕ್ತೇಸರ ದಯಾನಂದ ಹೆಜಮಾಡಿ, ಸುಧೀರ್ ಹೆಜಮಾಡಿ, ಶ್ರೀನಿವಾಸ್ ಹೆಜಮಾಡಿ ಸಹಿತ ಗ್ರಾಮದ ಪ್ರಮುಖರನೇಕರು ಪಾಲ್ಗೊಂಡಿದ್ದರು.

Related posts

Leave a Reply