Header Ads
Header Ads
Breaking News

ಹೆಜಮಾಡಿ ರಸ್ತೆಯಂಚಿನಲ್ಲಿ ಬೆಂಕಿ ಅವಘಡ : ಕೇಬಲ್ ಸಹಿತ ಮರಗಿಡಗಳು ನಾಶ

ಹೆಜಮಾಡಿಯಿಂದ ಬೋರ್‌ಗುಡ್ಡೆಗೆ ಹೋಗುವ ರಸ್ತೆಯ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಕೇಬಲ್ ವಯರುಗಳು ಸಹಿತ ಮರಗಿಡಗಲಿಗೂ ಬೆಂಕಿ ತಗುಲಿದೆ. ಕಿಡಿಗೇಡಿಗಳಿಂದ ತ್ಯಾಜ್ಯಕ್ಕೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಇದೇ ರಸ್ತೆಯಲ್ಲಿ ತಿಂಗಳ ಹಿಂದೆ ಎಣ್ಣೆ ಸಾಗಿಸುವ ಟ್ಯಾಂಕರ್ ಪಲ್ಟಿಯಾಗಿದ್ದು, ಪಕ್ಕದ ಗದ್ದೆಯಲ್ಲಿ ಟ್ಯಾಂಕರ್ ಪಲ್ಟಿಯಾಗಿದ್ದ ಸಂದರ್ಭದಲ್ಲಿ ಸೊರಿಕೆಯಾದ ಎಣ್ಣೆ ಶೇಖರಣೆಗೊಂಡಿದ್ದು, ಇದರ ಪರಿಣಾಮವಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಇನ್ನು ಸ್ಥಳಕ್ಕೆ ಅಗ್ನಿ ಶಾಮಕ ದಳದವರು ತಡವಾಗಿ ಆಗಮಿಸಿದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

Related posts

Leave a Reply