Header Ads
Header Ads
Header Ads
Breaking News

ಹೆಜ್ಜೆಗೆಜ್ಜೆ 2017-ಅಂತರ್ ಕಾಲೇಜು ನೃತ್ಯ ಸ್ಪರ್ಧೆ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ ಎಂಜಿ‌ಎಂ ಉಡುಪಿ ರನ್ನರ್ ಅಪ್

 

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಆಶ್ರಯದಲ್ಲಿ ನಡೆದ ಹೆಜ್ಜೆಗೆಜ್ಜೆ 2017 – ಮಂಗಳೂರು ವಿ.ವಿ ಅಂತರ್ ಕಾಲೇಜು ನೃತ್ಯ ಸ್ಪರ್ಧೆಯಲ್ಲಿ ಅತಿಥೇಯ ಆಳ್ವಾಸ್ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದು, ಉಡುಪಿಯ ಎಂಜಿ‌ಎಂ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಭರತನಾಟ್ಯ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‌ನ ದಿವ್ಯಾ(ಪ್ರ), ಎಂಜಿ‌ಎಂನ ಮೈತ್ರಿ(ದ್ವಿ), ಪುತ್ತೂರು ವಿವೇಕಾನಂದ ಕಾಲೇಜಿನ ಶಾಮ(ತೃ)ಸಮೂಹ-ಜನಪದ ನೃತ್ಯದಲ್ಲಿ ಆಳ್ವಾಸ್ ಪ್ರಥಮ, ಸುರತ್ಕಲ್ ಗೋವಿಂದದಾಸ್ ಕಾಲೇಜು ದ್ವಿತೀಯ, ಎಂಜಿ‌ಎಂ ತೃತೀಯ ಸ್ಥಾನಿಯಾಗಿದೆ.
-ರಂಗವಿಭಾಗದಲ್ಲೂ ಚಾಂಪಿಯನ್: ಆಳ್ವಾಸ್ ಕಾಲೇಜು ರಂಗವಿಭಾಗದಲ್ಲೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ರಂಗವಿಭಾಗದ ಮೈಮ್ ಹಾಗೂ ಪ್ರಹಸನದಲ್ಲಿ ಪ್ರಥಮ, ಮಿಮಿಕ್ರಿಯಲ್ಲಿ ಆಳ್ವಾಸ್‌ನ ನಿತ್ಯಾನಂದ ದ್ವಿತೀಯ ಹಾಗೂ ಏಕಾಂಕ ನಾಟಕದಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ.
ಇದರೊಂದಿಗೆ ಸಾಹಿತ್ಯ, ಲಲಿತ ಕಲೆ, ಸಂಗೀತಾ, ನೃತ್ಯ, ವಿಭಾಗದಲ್ಲೂ ಆಳ್ವಾಸ್ ಚಾಂಪಿಯನ್ಗಿ ಸಾಧನೆ ಮಾಡಿದೆ.

Related posts

Leave a Reply