Header Ads
Breaking News

ಹೆದ್ದಾರಿ ಅಗಲೀಕರಣ: ಭಟ್ಕಳದಲ್ಲಿ ತೆರವು ಕಾರ್ಯಾಚರಣೆ

 ಭಟ್ಕಳ ತಾಲೂಕಿನಾಧ್ಯಂತ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ತಾಲೂಕಿನ ತಹಶಿಲ್ದಾರ್ ನೆತೃತ್ವದಲ್ಲಿ ರಸ್ತೆಯ ತೆರವು ಕಾರ್ಯಾಚರಣೆ ಬರದಿಂದ ಸಾಗುತ್ತಿದೆದೇಶದ ಅಭಿವೃದ್ದಿಯ ದೃಷ್ಟಿಯಲ್ಲಿ ಕರಾವಳಿಯಾಧ್ಯಂತ ರಾಷ್ಟ್ರೀಯ ಹೆದ್ದಾರಿ ಅಗಲಿಕರಣಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು ಭಟ್ಕಳ ತಾಲೂಕಿನಾಧ್ಯಂತ ರಸ್ತೆ ಅಗಲಿಕರಣದ ಕಾಮಗಾರಿ ಬರದಿಂದ ಸಾಗುತ್ತಿದೆ ಈ ಹಿನ್ನೆಲೆಯಲಿ ತಾಲೂಕಿನಾಧ್ಯಂತ ತಹಶಿಲ್ದಾರ್ ನೆತ್ರತ್ವದಲ್ಲಿ ರಸ್ತೆ ತೆರವು ಕಾರ್ಯಚರಣೆ ನಡೆಯುತ್ತಿದ್ದು ಈ ಬಗ್ಗೆ ತಹಶಿಲ್ದಾರ್ ವಿ ಎನ್ ಭಾಡ್ಕರ್ ಮಾತನಾಡಿ ಈಗಾಗಲೆ ರಸ್ತೆ ಅಗಲಿಕರಣ ಕಾಮಗಾರಿ ಪ್ರಾರಂಬವಾಗಿದ್ದು ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಹಾರ ವಿತರಣೆಯಾಗಿರು ಪ್ರದೇಶಗಳಿಗೆ ಪಿಂಕ್ ನೋಟಿಸ್ ಅನ್ನು ಕೊಟ್ಟಿರುತ್ತೆವೆ ಒಂದು ವೇಳೆ ಈ ನೋಟಿಸಿಗೂ ಸ್ಪಂದಿಸದಿದ್ದಲ್ಲಿ ಅಂತಹ ಜಾಗಗಳನ್ನು ಪೋಲಿಸ್ ಬಂದೋಬಸ್ಥಿನ ಮೂಲಕ ಕುಲ್ಲಾ ಪಡಿಸಲಾಗುತ್ತದೆ ಎಂದು ಹೇಳಿದರು.

 ಇಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಶಿಲ್ದಾರ್ ಅವರು ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಆದರೆ ಸಾರ್ವಜನಿಕ ವಲಯಗಳಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಈವರೆಗೆ ಕೆಲವರಿಗೆ ಸಮರ್ಪಕವಾದ ಪರಿಹಾರವನ್ನು ನಿಡದೆ ರಸ್ತೆ ಅಗಲಿಕರಣ ಮಾಡ ಬೇಕು ಎನ್ನುವ ತರಾತುರಿಯಲ್ಲಿ ಐ ಆರ್ ಬಿ ಹಾಗು ತಾಲೂಕಾಡಳಿತ ಕೆಲವು ತೆರವು ಕಾರ್ಯಾಚರಣೆಗೆ ಮುಂದಾಗಿದೆ ಎಂಬ ವದಂತಿಗಳು ಹಬ್ಬುತ್ತಿದ್ದು ರಾಷ್ಟ್ರೀಯ ಕೆಲಸ ಎಂಬ ನೆಪವನ್ನು ಮುಂದಿಟ್ಟುಕೊಂಡು ಅಮಾಯಕರಿಗೆ ಸಮರ್ಪಕವಾಗಿ ಪರಿಹಾರವನ್ನು ನೀಡದೆ ತೆರವು ಕಾರ್ಯಾಚರಣೆ ನಡೆಸುವುದು ಅಭಿವೃದ್ದಿಯ ಹೆಸರಲ್ಲಿ ಬಡವನ ಗೋರಿಯ ಮೇಲೆ ಮನೆಯನ್ನು ಕಟ್ಟುವುದು ಎಷ್ಟರ ಮಟ್ಟಿಗೆ ಸರಿ ಇದು ಹೀಗೆ ಮುಂದುವರಿದು ಮುಂದೆ ಯಾವುದೇ ದೊಡ್ಡ ಪ್ರಮಾಣದ ಅವಘಡಗಳು ಸಂಬವಿಸದಿರಲಿ ಎನ್ನುವುದೆ ಪ್ರಜ್ಞಾವಂತ ನಾಗರಿಕನ ಆಶಯವಾಗಿದೆ

Related posts

Leave a Reply