Header Ads
Breaking News

ಹೆದ್ದಾರಿ ಅವ್ಯವಸ್ಥೆ ವಿರುದ್ಧ ಜನಾಂದೋಲನ : ನೆಲ್ಯಾಡಿಯಲ್ಲಿ ರಾ.ಹೆದ್ದಾರಿ ತಡೆ- ಬೃಹತ್ ಪ್ರತಿಭಟನೆ

ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿಸಿರೋಡ್ ತನಕದ ರಾಷ್ಟ್ರೀಯ ಹೆದ್ದಾರಿ 75 ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಚತುಷ್ಪಥ ರಸ್ತೆಯ ಹೆಸರಲ್ಲಿ ಈ ಹೆದ್ದಾರಿಯನ್ನು ಸಂಪೂರ್ಣ ಹಾಳುಗೆಡವಳಾಗಿದೆ. ತಕ್ಷಣ ಈ ಹೆದ್ದಾರಿಯನ್ನು ಸಮರ್ಪಕಗೊಳಿಸುವಂತೆ ಆಗ್ರಹಿಸಿ ಅ.10ರಂದು ನೆಲ್ಯಾಡಿಯಲ್ಲಿ ಒಂದು ಗಂಟೆ ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ವಂ. ವಗೀಸ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಳೆದ 3 ವರ್ಷಗಳಿಂದ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ಪ್ರಸ್ತು ಕಾಮಗಾರಿಯನ್ನು ನಿಲ್ಲಿಸಲಾಗಿದೆ. ರಸ್ತೆಯನ್ನು ಅಗೆದು ಹೊಂಡ ನಿರ್ಮಿಸಲಾಗಿದೆ. ನೂರಾರು ಮಂದಿ ವಾಹನ ಚಾಲಕರು ಈ ಹೊಂಡಗಳಿಗೆ ಬಿದ್ದು ಆಸ್ಪತ್ರೆ ಸೇರುವಂತಾಗಿದೆ ಎಂದು ಹೇಳಿದ್ರು. ಸುದ್ದಿಗೋಷ್ಟಿಯಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಕೆ.ಜೆ., ಸದಸ್ಯ ವಂ. ಆದರ್ಶ್ ಜೋಸೆಫ್, ನೆಲ್ಯಾಡಿ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ನೆಲ್ಯಾಡಿ ಹಾಗೂ ಮತ್ತಿತರರು ಹಾಜರಿದ್ದರು.

 

Related posts

Leave a Reply

Your email address will not be published. Required fields are marked *