Header Ads
Header Ads
Breaking News

ಹೆದ್ದಾರಿ ಕಾಮಗಾರಿ ಅವಾಂತರ:ಕಿನ್ನಿಮುಲ್ಕಿ ವಾರ್ಡ್‌ನ 20ಕ್ಕೂ ಅಧಿಕ ಮನೆಗಳು ಅತಂತ್ರ

 ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಆವಾಂತರಗಳು ಒಂದೆರಡಲ್ಲ. ಉಡುಪಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಗಳು ಈ ಹಿಂದೆ ಅನೇಕ ಆವಾಂತರಗಳನ್ನು ಸೃಷ್ಟಿಸಿದ್ದರೆ. ಕಾಮಗಾರಿ ಮುಗಿದ ಮೇಲೂ ಅನೇಕ ಸಮಸ್ಯೆಗಳು ಕಂಡು ಬರುತ್ತಿದೆ. ಕಿನ್ನಿಮುಲ್ಕಿಯಲ್ಲಿ 20ಮನೆಗಳು ಅತಂತ್ರದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿ ಅನೇಕ ಅವಾಂತರಗಳನ್ನು ಈ ಹಿಂದೆ ಸೃಷ್ಟಿ ಮಾಡಿದ್ದು ಇದೀಗ ಕಾಮಗಾರಿ ಮುಗಿದ ಕಡೆಯಲ್ಲೂ ಸಮಸ್ಯೆಗಳು ಉಲ್ಬಣಗೊಂಡಿದೆ. ಪ್ರಮುಖವಾಗಿ ಕಿನ್ನಿಮುಲ್ಕಿ ವಾರ್ಡ್ ನ ಸ್ವಾಗತ ಗೋಪುರದ ಬಳಿಯ ಮನೆಗಳು ಅತಂತ್ರದಲ್ಲಿವೆ. ಕಾಮಗಾರಿ ನಡೆಯುವ ಮುಂಚೆ ಈ ಪ್ರದೇಶದಲ್ಲಿ ಮನೆಗಳಿಗೆ ಸಾಗಲು ರಸ್ತೆ ಇತ್ತು, ವಿದ್ಯುತ್ ದೀಪದ ವ್ಯವಸ್ಥೆ ಇತ್ತು. ಆದ್ರೆ ಹೆದ್ದಾರಿ ಕಾಮಗಾರಿ ಮುಗಿದ ಮೇಲೆ ಮನೆಯಿಂದ ಮನೆಗೆ ಹೋಗಲು ಕಂಪೌಂಡ್ ಹಾರಬೇಕಿದೆ. ವಿದ್ಯುತ್ ದೀಪ ಇಲ್ಲದೇ ಹಾವುಗಳ ಓಡಾಟದಿಂದ ಮನೆಮಂದಿ ಭಯಬೀತರಾಗಿದ್ದಾರೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವನ್ನು ವಹಿಸಿದ್ದು ಪರ್ಯಾಯ ರಸ್ತೆ, ವಿದ್ಯುತ್ ದೀಪ ಹೀಗೆ ಮೂಲಭೂಇತ ಸೌಕರ್ಯ ಒದಗಿಸಬೇಕಿದ್ದ ಅಧಿಕಾರಿಗಳು ಭೂಗತರಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದರು.ಆದ್ರೆ ಅಧಿಕಾರಿಗಳು ಮಾತ್ರ ಇತ್ತ ಸುಳಿಯದೇ ನಿರ್ಲಕ್ಷ್ಯವಹಿಸಿದ್ದಾರೆ. ಇನ್ನು ಚರಂಡಿಯ ವ್ಯವಸ್ಥೆಯನ್ನು ಈ ಭಾಗದಲ್ಲಿ ಮಾಡದೇ ಇರುವುದರಿಂದ ಮಳೆಗಾಳದಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವ ಹಾಗೂ ಮಳೆ ನೀರು ಮನೆಗೆ ನುಗ್ಗುವ ಪರಿಸ್ಥಿತಿ ಮಳೆಗಾಳದಲ್ಲಿ ಎದುರಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಇಲ್ಲಿನವರು ಹೀನಾಯ ಪರಿಸ್ಥಿತಿಯಲ್ಲಿ ಬದುಕುವ ಅನಿವಾರ್ಯತೆ ಇದ್ದು ಮಣ್ಣು ಕುಸಿತದಂತಹ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಕಾಮಗಾರಿ ನಡೆಸಿದ ಬಳಿಕ ಕಲ್ಲು, ಮಣ್ಣುಗಳ ರಾಶಿ ಹಾಗೇ ಇದ್ದು ಅದನ್ನ ವಿಲೇವಾರಿ ಮಾಡಿಲ್ಲ. ಈ ಎಲ್ಲಾ ಕೆಲಸ ಮಾಡಬೇಕಿದ್ದ ಹೆದ್ದಾರಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸೂಕ್ತ ವಾದ ಕ್ಲ್ರಮಕ್ಕೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಕಿನ್ನಿಮುಲ್ಕಿಯಲ್ಲಿ 20ಕ್ಕೂ ಅಧಿಕ ಮನೆಗಳು ಇದೀಗ ಕಾಮಗಾರಿಯ ಕಾರಣದಿಂದ ತೊಂದರೆಗೀಡಾಗಿದೆ. ಆದಷ್ಟು ಬೇಕ ಹೆದ್ದಾರಿ ಇಲಾಖೆಯ ಧಿಕಾರಿಗಳು ಇತ್ತ ಧಾವಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ.

Related posts

Leave a Reply