Header Ads
Header Ads
Breaking News

ಹೆದ್ದಾರಿ ಪಕ್ಕದಲ್ಲಿ ಬಾಯ್ತೆರೆದು ನಿಂತು ಹೊಂಡ

ಎರ್ಮಾಳಿನಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹೆದ್ದಾರಿ ಗುತ್ತಿಗೆ ಕಂಪನಿ ನವಯುಗ್ ನಿರ್ಮಾಣ ಮಾಡಿ ಉಳಿಸಿ ಹೋದ ಹೊಂಡಗಳು ಪಾದಚಾರಿ ಶಾಲಾ ಪುಟಾಣಿಗಳಿಗೆ ಬೆದರಿಕೆಯೋಡ್ಡುತ್ತಿದ್ದು, ಇದರ ವಿರುದ್ದ ತುರ್ತು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಹೆದ್ದಾರಿಯುದ್ಧಕ್ಕೂ ಅದೇಷ್ಟೋ ಸಮಯದ ಹಿಂದೆ ಅಪಘಾತದಲ್ಲಿ ಜಖಂಗೊಂಡಿರುವ ಮೈಲುಗಲ್ಲು ಸಹಿತ ಬಾಂಡ್ ಕಲ್ಲುಗಳನ್ನು ಬದಲಿಸಿದೆ ಕರ್ತವ್ಯ ಲೋಪ ಎಸಗುತ್ತಿರುವ ನವಯುಗ್, ಅಪಘಾತ ಎಸಗಿದ ವಾಹನ ಮಾಲಕರಿಂದ ದಂಡ ವಸೂಲಿ ಮಾಡಿದ್ದರೂ ತಡೆಬೀಲಿ ಸಹಿತ ಕಲ್ಲುಗಳನ್ನು ದುರಸ್ಥಿ ನಡೆಸಿಲ್ಲ. ಎರ್ಮಾಳು ಕೆನರಾ ಬ್ಯಾಂಕ್ ಮುಂಭಾಗದ ತಡೆಬೇಲಿಗೆ ಟ್ಯಾಂಕರೊಂದು ಡಿಕ್ಕಿಯಾಗಿದ್ದು, ತಡೆಬೇಲಿ ನಾಶಗೊಂಡ ಹಿನ್ನಲೆಯಲ್ಲಿ ಟ್ಯಾಂಕರ್ ಮಾಲಿಕರಿಂದ ಲಕ್ಷಾಂತರ ರೂಪಾಯಿ ಕಕ್ಕಿಸಿಕೊಂಡು ಸರಿ ಸುಮಾರು ಒಂದುವರೆ ವರ್ಷಕಳೆದರೂ ತಲೆಬೇಲಿ ದುರಸ್ಥಿಗೊಳಿಸಿಲ್ಲ, ಇದೀಗ ಮಳೆ ಆರಂಭಗೊಳ್ಳುತ್ತಿದಂತೆ ತುಂಡಾಗಿರುವ ಬಾಂಡ್‌ಗಲ್ಲುಗಳನ್ನು ತೆರವುಗೊಳಿಸುವುದಕ್ಕಾಗಿ ಹೊಂಡ ನಿರ್ಮಿಸಿ ಮಾಯವಾದ ಕಾರ್ಮಿಕರು ಸಹಿತ ಕಂಪನಿ ಅಧಿಕಾರಿಗಳು ನಾಪತ್ತೆಯಾಗಿದ್ದು, ಇದೀಗ ಮಳೆ ಬಂದು ಆ ಹೊಂಡಗಳಲ್ಲಿ ನೀರು ತುಂಬುತ್ತಿದ್ದು, ಪಾದಚಾರಿಗಳಾಗಿ ಶಾಲೆಗೆ ಸಾಗುತ್ತಿರುವ ಪುಟಾಣಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತ್ತಿದೆ.

 

ನವಯುಗ್ ಕಂಪನಿ ಎನ್ನೇಲ್ಲಾ ಕಾಮಗಾರಿಗಳಲ್ಲೂ ನಿರ್ಲಕ್ಷ್ಯವಹಿಸಿ ಸಾರ್ವಜನಿಕರಿಗೆ ಸಮಸ್ಯೆಯುಂಟು ಮಾಡುತ್ತಿದ್ದು, ಇಷ್ಟರಲ್ಲೇ ಕಂಪನಿಯ ವಿರುದ್ಧ ಸಿಡಿದ ಸಂಸದೆ ಶೋಭ ಕರಂದ್ಲಾಜೆ ಬ್ಲ್ಯಾಕ್ ಲೀಸ್ಟಿಗೆ ಸೇರಿಸುವ ಬಗ್ಗೆ ಮಾತನಾಡಿದರೆ, ಕುಂದಾಪುರ ಸಹಾಯಕ ಕಮಿಷನರ್ ಭೂಬಾಲನ್ ಆಮೆಗತಿಯಿಂದ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ನವಯುಗ್ ವಿರುದ್ಧ ನೋಟಿಸು ಜಾರಿಮಾಡಿದ್ದನ್ನು ಇಲ್ಲಿ ಸ್ಮರಿಸ ಬಹುದಾಗಿದೆ. ಅನಾಹುತ ನಡೆದ ಬಳಿಕ ಪರಿಹಾರ, ಮೊಸಳೆ ಕಣ್ಣೀರು ಸುರಿಸುವ ಬದಲು ಅನಾಹುತಕ್ಕೆ ಮುನ್ನ ರಾಜಕೀಯ ಧುರೀಣರು ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಲಿ ಎಂಬುದು ಸಾರ್ವಜನಿಕರ ಕಢಕ್ ನುಡಿ.

Related posts

Leave a Reply