Header Ads
Header Ads
Breaking News

ಹೆದ್ದಾರಿ ಪ್ರಾಧಿಕಾರದ ತೆರವು ಕಾರ್ಯಚರಣೆಯಲ್ಲಿ ಇಬ್ಬಗೆಯ ನೀತಿ ತರಾಟೆಗೆ ತೆಗೆದುಕೊಂಡ ಸ್ಥಳಿಯ ಪತ್ರಕರ್ತ ಉಲ್ಲಾಸ್ ಶಾನಬಾಗ್

ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಾಷ್ರ್ಟಿಯ ಹೆದ್ದಾರಿ ಅಗಲಿಕರಣದ ಹಿನ್ನೆಲೆಯಲ್ಲಿ ಹೆದ್ದಾರಿ ಅಕ್ಕ ಪಕ್ಕದಲ್ಲಿನ ಅಂಗಡಿ ಮಳಿಗೆಗಳ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಇಬ್ಬಗೆಯ ನೀತಿಯನ್ನು ಪ್ರದರ್ಶಿಸಿದ ಕಾರಣ ಸ್ಥಳಿಯ ಪತ್ರಕರ್ತರಾದ ಉಲ್ಲಾಸ್ ಶಾನಬಾಗ್ ಮಧ್ಯ ಪ್ರವೇಶಿಸಿ ಐಆರ್‌ಬಿ ಕಂಪನಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಹಿನ್ನೆಲೆಯಲ್ಲಿ ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ಅಂಗಡಿ ಮಳಿಗೆಗಳನ್ನು ತೆರವು ಮಾಡುವ ಸಂದರ್ಭದಲ್ಲಿ, ಬಡ ಅಮಾಯಕರ ಅಂಗಡಿ ಗೂಡಂಗಡಿಗಳನ್ನು ತೇರವು ಗೋಳಿಸಿದ್ದರು. ಆದರೆ ಕೆಲವರು ಅಂಗಡಿ ತೆರವು ಗೋಳಿಸುವ ಸಂದರ್ಭ ವಿರೋಧಿಸಿದ್ದರು. ಸ್ಥಳಿಯ ಪತ್ರಕರ್ತರಾದ ಉಲ್ಲಾಸ್ ಶಾನಭಾಗ್ ಕಾನೂನು ಎಲ್ಲರಿಗೂ ಒಂದೆ ಆಗಿದ್ದು ಎಲ್ಲರಿಗೂ ಸರಿಯಾದ ನ್ಯಾಯ ಸಿಗಬೇಕು ಬಡವರಿಗೆ ಒಂದು ಶ್ರೀಮಂತರಿಗೆ ಒಂದು ನ್ಯಾಯ ಮಾಡಬೇಡಿ. ಅಂಗಡಿಗಳನ್ನು ತೆರವುಗೋಳಿಸುವುದಿದ್ದರೆ ಕಾನೂನು ಪ್ರಕಾರ ಎಲ್ಲ ಅಂಗಡಿಗಳನ್ನು ತೆರವು ಗೋಳಿಸಿ ಎಂದು ಐ.ಆರ್.ಬಿ ಕಂಪನಿಯನ್ನು ತರಾಟೆಗೆ ತೆಗೆದುಕೊಂಡರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ