Header Ads
Header Ads
Breaking News

ಹೆಮ್ಮಾಡಿಯಲ್ಲಿ ನಡೆದ ಬಣ್ಣದ ಬೆಸುಗೆ-2019

ಬಣ್ಣದ ಬೆಸುಗೆ-2019 ಬಣ್ಣದ ಲೋಕದ ಗಾರುಡಿಗ, ಚಿತ್ರಕಲಾ ಶಿಕ್ಷಕ, ದಿವಂಗತ ಬೋಜು ಹಾಂಡರ ಅವರ ನೆನಪಿನ ಕಾರ್ಯಕ್ರಮದ ಪ್ರಯುಕ್ತ ಎರಡನೇ ವರ್ಷದ ಚಿತ್ರಕಲಾ ಸ್ಪರ್ಧೆಯನ್ನು ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಜ್ಞಾನ ಯುವಜನ ಹೆಮ್ಮಾಡಿ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಸಮುದಾಯ ಕುಂದಾಪುರ ಅಧ್ಯಕ್ಷ ಉದಯ ಗಾಂವ್ಕರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಚಿತ್ರಕಲೆಯನ್ನೇ ಉಸಿರಾಗಿಸಿಕೊಂಡಿದ್ದ ಬೋಜು ಹಾಂಡರು ತಮ್ಮ ಬದುಕನ್ನು ದೊಡ್ಡ ಮಟ್ಟದಲ್ಲಿ ಕಟ್ಟಿಕೊಳ್ಳಬಹುದಿತ್ತು. ಆದರೆ ಅವರು ತಮ್ಮಲ್ಲಿರುವ ಅಗಾಧ ಕಲೆಯನ್ನು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಧಾರೆ ಎರೆಯುವ ಮೂಲಕ ವೃತ್ತಿ ಜೀವನದಲ್ಲಿ ಅವರೊಬ್ಬ ಅದ್ಭುತ ಶಿಕ್ಷಕರೆನಿಸಿಕೊಂಡಿದ್ದರು ಎಂದು ಹೇಳಿದರು.

ಬೋಜು ಹಾಂಡರ ಪುತ್ರ ರಾಕೇಶ್ ಹಾಂಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಿತ್ರಕಲಾ ಶಿಕ್ಷಕ ಮಂಜುನಾಥ ಮಯ್ಯ, ಜನತಾ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ಬೋಜು ಹಾಂಡರ ಪುತ್ರಿ ರೂಪಶ್ರೀ, ಜ್ಞಾನ ಯುವಜನ ಹೆಮ್ಮಾಡಿಯ ಸಂಚಾಲಕ ವಿಘ್ನೇಶ್ ದೇವಾಡಿಗ ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಚಿತ್ರಕಲಾ ಶಿಕ್ಷಕ ಸುರೇಶ್ ಡಿ.ಎಚ್ ಹರೀಶ್ ಹೆಮ್ಮಾಡಿ, ಶ್ರೀಕಾಂತ ದೇವಾಡಿಗ ಭಟ್ರಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply