Header Ads
Breaking News

ಹೆಮ್ಮಾಡಿಯ ಮೂರ್ತೆದಾರರ ನೂತನ ಸಭಾಭವನದ ಉದ್ಘಾಟನೆ

ಕುಂದಾಪುರ: ಹೆಮ್ಮಾಡಿಯ ಮೂರ್ತೆದಾರರ ಸೇವಾ ಸಹಕಾರಿ ಸಂಘದಿಂದ ತಲ್ಲೂರಿನಲ್ಲಿ ನಿರ್ಮಾಣಗೊಂಡ ಮೂರ್ತೆದಾರರ ನೂತನ ಸಭಾಭವನದ ಉದ್ಘಾಟನೆ ಹಾಗೂ ಕಲ್ಪತರು ಸ್ವ-ಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣಾ ಸಮಾರಂಭ ಭಾನುವಾರ ತಲ್ಲೂರಿನಲ್ಲಿ ನಡೆಯಿತು.


ನೂತನ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಮೂರ್ತೆದಾರರ ಸಹಕಾರಿ ಸಂಘದ ಲಾಭಾಂಶದಿಂದಲೇ ಈ ಸಭಾಭವನ ನಿರ್ಮಿಸಿರುವುದು ಶ್ಲಾಘನೀಯ. ಈ ಸಂಘದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಶುಭಹಾರೈಸಿದರು.
ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ಸಹಕಾರಿ ಸಂಘಗಳು ಗ್ರಾಹಕರ ವಿಶ್ವಾಸ ಗಳಿಸುತ್ತಿದೆ. ಸಂಘದ ಸದಸ್ಯರು ಠೇವಣಿ ಹೆಚ್ಚು ಇಟ್ಟರೆ, ಸಂಘ ಮತ್ತಷ್ಟು ಬೆಳೆಯಲು ಸಾಧ್ಯ. ಇದರಿಂದ ಬರುವ ಲಾಭಾಂಶದಿಂದ ಸಮಾಜಕ್ಕೆ ಅನುಕೂಲವಾಗುವ ಅನೇಕ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
`ಶ್ರೇಷ್ಠ ಸಹಕಾರಿ’ ಪ್ರಶಸ್ತಿ ಪಡೆದ ಮರವಂತೆ ಬಡಾಕೆರೆ ವ್ಯ. ಸೇ. ಸ. ಸಂಘದ ಅಧ್ಯಕ್ಷ ರಾಜು ಪೂಜಾರಿ ಸಮ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ವರ್ಷದಿಂದ ಆದಾಯ ತೆರಿಗೆ ಇಲಾಖೆಯು ಸಹಕಾರಿ ಸಂಘಗಳ ಲೆಕ್ಕ ಪತ್ರವನ್ನು ಮೌಲ್ಯಮಾಪನ ಮಾಡಿ, ಸಹಕಾರಿ ಸಂಘಗಳಿಗೆ ಉಳಿಯುವ ಲಾಭಾಂಶದ ಹೆಚ್ಚಿನ ಪಾಲನ್ನು ತೆರಿಗೆ ಕಟ್ಟುವಂತೆ ಸೂಚಿಸಿರುವುದು ಅವೈಜ್ಞಾನಿಕವಾಗಿದೆ. ಈ ಬಗ್ಗೆ ತೆರಿಗೆ ಕಟ್ಟುವಂತೆ ನೋಟೀಸ್ ಕೂಡ ನೀಡಲಾಗುತ್ತಿದೆ. ಇದರಿಂದ ಸಹಕಾರಿ ಸಂಘಗಳಿಗೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಲಿದೆ ಎಂದರು.

ಸಂಘದ ಅಧೀನದಲ್ಲಿರುವ ವಿವಿಧ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶಗಳನ್ನು ವಿತರಿಸಲಾಯಿತು. ವಿವಿಧ ಸಹಕಾರಿ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಕಟ್ಟಡದ ಯೋಜನೆ ರೂಪಿಸಿದ ಇಂಜಿನಿಯರ್ ಸತೀಶ್ ಪೂಜಾರಿಯವರನ್ನು ಸಮ್ಮಾನಿಸಲಾಯಿತು.

ಮೂರ್ತೆದಾರರಿಗೆ ಸನ್ಮಾನ
ಹಿರಿಯ 10 ಮಂದಿ ಮೂರ್ತೆದಾರರಾದ ಬಡಾಕೆರೆಯ ಮಂಜು ಪೂಜಾರಿ, ಪಂಜು ಪೂಜಾರಿ, ಸುಬ್ಬಯ್ಯ ಪೂಜಾರಿ, ಲಿಂಗ ಪೂಜಾರಿ ಉಪ್ಪಿನಕುದ್ರು, ಮಂಜು ಪೂಜಾರಿ ಕಟ್‍ಬೆಲ್ತೂರು, ಪಂಜು ಪೂಜಾರಿ, ತಿಮ್ಮ ಪೂಜಾರಿ ಆಲೂರು, ರಾಮ ಪೂಜಾರಿ ಬಗ್ವಾಡಿ, ಹಕ್ಲಾಡಿಯ ದೇವ ಪೂಜಾರಿ, ಶಂಕರ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಬಿಲ್ಲವ ಸಮಾಜದ ಸಾಧಕರಾದ ಯೋಗಪಟುಗಳಾದ ಧನ್ವಿ ಮರವಂತೆ, ತನ್ವಿತಾ ಕುಂದಬಾರಂದಾಡಿ, ವಿವಿ ರ್ಯಾಂಕ್ ಪಡೆದ ಸುಜನ್ ಆಲೂರು ಅವರನ್ನು ಅಭಿನಂದಿಸಲಾಯಿತು.

ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೊರಗ ಪೂಜಾರಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಬಿಲ್ಲವ, ಸಂಘದ ಉಪಾಧ್ಯಕ್ಷ ಶಂಕರ ಪೂಜಾರಿ, ನಿರ್ದೇಶಕರಾದ ಶ್ರೀನಿವಾಸ ಪೂಜಾರಿ, ಮಂಜು ಆರ್. ಪೂಜಾರಿ, ಶೇಖರ ಪೂಜಾರಿ, ರಘು ಪೂಜಾರಿ, ನರಸಿಂಹ ಪೂಜಾರಿ, ನಾರಾಯಣ ಪೂಜಾರಿ, ಉದಯ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *