Header Ads
Breaking News

ಹೈನುಗಾರಿಕೆಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡಾಗ ಲಾಭ ಪಡೆಯಲು ಸಾಧ್ಯವಿದೆ:ರವಿರಾಜ ಹೆಗ್ಡೆ ಹೇಳಿಕೆ

 

ಬಂಟ್ವಾಳ ತಾಲೂಕು ಸರಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ವಿಸ್ತೃತ ಕಟ್ಟಡ ಕ್ಷೀರಧಾರೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆಯಲ್ಲಿ ಲಾಭಾಂಶ ಪಡೆಯಲು ಹಲವಾರು ಯೋಜನೆಯನ್ನು ಕೆಎಂಎಫ್ ಮಾಡಿದೆ. ಆಧುನಿಕ ವಿಧಾನ, ವೈಜ್ಞಾನಿಕ ಪದ್ಧತಿಯಿಂದ ಶ್ರಮವಹಿಸಿ ಹೈನುಗಾರಿಕೆ ನಡೆಸುವುದರಿಂದ ಉತ್ತಮ ಆದಾಯ ಪಡೆಯಬಹುದು. ಇಂದು ಕೃಷಿ ಕಾರ್ಯ ದೂರವಾಗುತ್ತಿದ್ದು ಕೃಷಿಯ ಸ್ಥಾನವನ್ನು ಪರಿಪೂರ್ಣವಾಗಿ ಹೈನುಗಾರಿಕೆ ಪಡೆದಿದೆ. ಆರ್ಥಿಕ ಚೈತನ್ಯ, ಜೀವನ ನಿರ್ವಹಣೆ ಹೈನುಗಾರಿಕೆಯಿಂದ ಸಾಧ್ಯ ಎಂದು ಹೇಳಿದರು.

ರೈತರು ಗುಣಮಟ್ಟದ ಹಾಲಿನ ಬಗ್ಗೆ ಗಮನ ಹರಿಸಬೇಕು, ಮಾರುಕಟ್ಟೆ ಉಳಿಸಬೇಕಾದರೆ ಗುಣಮಟ್ಟದ ಹಾಲು ನೀಡಬೇಕಾಗಿದೆ ಎಂದ ಅವರು ಹಾಲು ಒಕ್ಕೂಟವೂ ಲೀಟರ್ ಹಾಲಿಗೆ ಉತ್ತಮ ದರವನ್ನು ನೀಡುತ್ತಿದೆ. ಹಾಲು ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಸರಪಾಡಿ ಹಾಲು ಉತ್ಪಾದಕರ ಸಂಘ ಉತ್ತಮ ಸಾಧನೆ ಮಾಡಿದೆ ಎಂದರು.ಸಂಘದ ಅಧ್ಯಕ್ಷ ವಿಶ್ವನಾಥ ನಾಯ್ಕ ಕಾನೆಕೋಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ದ.ಕ.ಹಾಲು ಒಕ್ಕೂಟ ನಿರ್ದೇಶಕರಾದ ಡಾ| ಕೆ.ಎಂ.ಕೃಷ್ಣ ಭಟ್, ಕೆ.ಪಿ. ಸುಚರಿತ ಶೆಟ್ಟಿ, ನರಹರಿ ಪ್ರಭು, ವೀಣಾ ಆರ್. ರೈ, ವ್ಯ.ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್ ಕೆ., ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ, ತಾ.ಪಂ.ಸದಸ್ಯೆ ಸ್ವಪ್ನಾ ವಿಶ್ವನಾಥ, ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply