Header Ads
Header Ads
Header Ads
Breaking News

ಹೈಬ್ರಿಡ್ ಕೆಂಪು ಅಕ್ಕಿಯ ಭತ್ತದ ನೂತನ ತಳಿಗಳು ಪ್ರಗತಿಪರ ರೈತ ಶಂಕರ ರೈ ಹೊಲದಲ್ಲಿ ಬೆಳೆಸಲಾದ ಕೆಂಪು ಅಕ್ಕಿ ತೆಂಕ ಮಿಜಾರು ಗ್ರಾಮದ ಪ್ರಗತಿಪರ ರೈತನ ಸಾಹಸ

ತೆಂಕಮಿಜಾರು ಗ್ರಾಮದ ಪ್ರಗತಿಪರ ರೈತ ಶಂಕರ ರೈ ಅವರ ಹೊಲದಲ್ಲಿ ಬೆಳೆಸಲಾಗಿರುವ ಹೈಬ್ರಿಡ್ ಕೆಂಪು ಅಕ್ಕಿಯ ಭತ್ತದ ನೂತನ ತಳಿಗಳನ್ನು ವಿವಿಧ ಅಧಿಕಾರಿಗಳು ಸಹಿತ ಕೃಷಿಕರು ಭೇಟಿ ನೀಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ದ.ಕ. ಮೂಲದ, ಬೆಂಗಳೂರಿನಲ್ಲಿರುವ ಡಾ. ಮನಮೋಹನ ಅತ್ತಾವರ ಅವರ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯ 14 ವರ್ಷಗಳ ಪರಿಶ್ರಮ ಈ ತಳಿಗಳ ಹಿಂದಿದೆ. ಎಸ್. ಎನ್. ರಾಥೋ ಈ ತಳಿಯನ್ನು ಸಂಶೋಧಿಸಿದವರು.

ತೆಂಕಮಿಜಾರು ಗ್ರಾಮದ ಪ್ರಗತಿಪರ ರೈತ ಶಂಕರ ರೈ ಅವರ ಹೊಲದಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಾತ್ಯಕ್ಷಿಕೆ ರೂಪದಲ್ಲಿ ಎಂಬ ಎರಡು ತಳಿಗಳನ್ನು ಬೆಳೆಸಲಾಗಿದೆ. ಎಕ್ರೆಗೆ ಕೇವಲ ೬ ಕೆಜಿ ಬೀಜ ಸಾಕು. ಚದರ ಮೀಟರ್ ಜಾಗದಲ್ಲಿ 20 ರಿಂದ 25 ಗ್ರಾಂ ಬೀಜ ಹಾಕಿ ನೇಜಿ ತಯಾರಿಸಬೇಕು. ಸಸಿಗೆ ನಾಲ್ಕು ಎಲೆಗಳು ಮೂಡುವ ವೇಳೆಗೆ ಅಂದರೆ ಸುಮಾರು 25 ದಿನ ತುಂಬಿದಾಗ ಕಿತ್ತು ಮೊದಲೇ ಹದಮಾಡಿಟ್ಟ ನಾಟಿ ಮಾಡಬೇಕು. ವಿವಿಧ ಕಾರಣಗಳಿಂದ ಭತ್ತದ ಕೃಷಿಯಿಂದ ವಿಮುಖರಾಗುತ್ತಿರುವ ಕರಾವಳಿಯ ರೈತರು ಶೇ. 66 ರಷ್ಟು ಅಧಿಕ ಉತ್ಪಾದನೆ ತೋರುತ್ತಿರುವ ಈ ನೂತನ ತಳಿಗಳಿಂದ ಸ್ಪೂರ್ತಿ ಪಡೆದು ಮತ್ತೆ ಗದ್ದೆಗಿಳಿಯುವಂತಾದೀತು.

Related posts

Leave a Reply