Breaking News

ಹೈಬ್ರೀಡ್ ಬೀಜಗಳ ಬೆಲೆ ಇಳಿಕೆ, ದೆಹಲಿ ಮಂತ್ರಿ ಸಭೆಯಲ್ಲಿ ತೀರ್ಮಾನ

ಹೈಬ್ರಿಡ್ ಬೀಜಗಳ ಬೆಲೆಗಳನ್ನು ಶೇ. ೧೦ರಷ್ಟು ತಗ್ಗಿಸಲು ಬೀಜ ತಯಾರಿಕಾ ಉದ್ದಿಮೆ ನಿರ್ಧರಿಸಿದೆ.
ಈಗಾಗಲೇ ನಿಯಂತ್ರಣಕ್ಕೆ ಒಳಪಟ್ಟಿರುವ ಹತ್ತಿ ಬೀಜ ಹೊರತುಪಡಿಸಿ, ಮೆಕ್ಕೆಜೋಳ, ಅಕ್ಕಿ, ಸಜ್ಜೆ, ಸಾಸಿವೆ ಮತ್ತು ತರಕಾರಿಗಳಿಗೆ ಸಂಬಂಧಿಸಿದಂತೆ ಹೈಬ್ರಿಡ್ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಗರಿಷ್ಠ?ಮಾರಾಟ ಬೆಲೆಗಿಂತ ಶೇ. ೧೦ರಷ್ಟು ಕಡಿಮೆ ದರಕ್ಕೆ ಹೈಬ್ರಿಡ್ ಬೀಜಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ಕರೆದಿದ್ದ ಸಭೆಯಲ್ಲಿ ಈ ಬೆಲೆ ಕಡಿತ ಘೋಷಿಸಲಾಗಿದೆ. ಹೊಸ ದರಗಳು ಇದೇ ಜೂ. ೧೯ರಿ೦ದ ಜಾರಿಗೆ ಬರಲಿವೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಇದರಿಂದ ಕೆಲಮಟ್ಟಿಗೆ ಪರಿಹಾರ ದೊರೆಯಲಿದೆ.

Related posts

Leave a Reply