Header Ads
Header Ads
Breaking News

ಹೊಂಡ ಗುಂಡಿಗಳ ಬಿ. ಸಿ. ರೋಡ್ ಸರ್ವಿಸ್ ರಸ್ತೆ, ಭಿಕ್ಷೆ ಎತ್ತಿ ರಿಕ್ಷಾ ಚಾಲಕರಿಂದ ಸರ್ವಿಸ್ ರಸ್ತೆಯ ದುರಸ್ಥಿ

ಹೊಂಡಗಳ ಸಾಮ್ರಾಜ್ಯವಾಗಿರುವ ಬಿ. ಸಿ. ರೋಡಿನ ಸರ್ವಿಸ್ ರಸ್ತೆಯನ್ನು ರಿಕ್ಷಾ ಚಾಲಕರು ಭಿಕ್ಷೆ ಎತ್ತಿ ಶನಿವಾರ ದುರಸ್ತಿ ಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದಾಗ ನೀಡಿದ ಭರವಸೆ ಹುಸಿಯಾದ ಕಾರಣ ನಾವೂರು ಗ್ರಾ. ಪಂ. ಸದಸ್ಯ ಸದಾನಂದ ನಾವೂರು ಅವರ ನೇತೃತ್ವದಲ್ಲಿ ಒಟ್ಟಾದ ರಿಕ್ಷಾ ಚಾಲಕರು ಭಿಕ್ಷೆ ಎತ್ತಿ ಅದರಿಂದ ಸಂಗ್ರಹವಾದ ಹಣದಿಂದ ಸರ್ವಿಸ್ ರಸ್ತೆ ದುರಸ್ತಿ ಕೈಕೊಂಡರು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಸರ್ವಿಸ್ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ವಾಹನ ಸಂಚಾರವೇ ದುಸ್ತರವಾಗಿತ್ತು. ಹೊಂಡಕ್ಕೆ ಸಿಲುಕಿ ವಾಹನಗಳೆಲ್ಲ ಉರುಳಿ ಬೀಳುತ್ತವೋ ಎನ್ನುವಷ್ಟು ವಾಲಿಕೊಂಡು ಹೋಗುತ್ತಿದ್ದ ದೃಶ್ಯ ಭಯಾನಕವಾಗಿತ್ತು. ಹದಗೆಟ್ಟ ರಸ್ತೆ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಯಿಸುತ್ತಿದ್ದರೂ ರಸ್ತೆ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ರೋಸಿ ಹೋದ ರಿಕ್ಷಾ ಚಾಲಕರು ಜೆಸಿಬಿ ಬಳಸಿ ಸರ್ವಿಸ್ ರಸ್ತೆ ಹಾಗೂ ಮೇಲ್ಸೆತುವೆ ಅಡಿ ಭಾಗದಲ್ಲಿ ಇದ್ದ ಚಪ್ಪಡಿಗಳನ್ನು ಹಾಕಿ ಹೊಂಡ ಮುಚ್ಚಲಾಯಿತು. ಕಾಮಗಾರಿ ನಡೆಸಲು ಬೇಕಾದ ಹಣವನ್ನು ಭಿಕ್ಷೆ ಎತ್ತಿ ಉಳಿದ ಹಣವನ್ನು ತಾವೇ ಭರಿಸಿ ಜನಪ್ರತಿನಿಧಿಗಳು ನಾಚಿಕೆ ಪಟ್ಟುಕೊಳ್ಳವ ರೀತಿಯಲ್ಲಿ ರಿಕ್ಷಾ ಚಾಲಕರು ಕಾರ್ಯನಿರ್ವಹಿಸಿದರು.

Related posts

Leave a Reply