Header Ads
Header Ads
Header Ads
Breaking News

ಹೊಟೇಲ್ ಕಾರ್ಮಿಕನಿಗೆ ಮಾಲಕನಿಂದ ಹಲ್ಲೆ ಪ್ರಕರಣ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ್ ಮರಣ ಆರೋಪಿ ಕೆ.ಜಾರ್ಜ್ ಬಂಧಿಸಿದ ಪೊಲೀಸರು

ಹೊಟೇಲ್ ಕಾರ್ಮಿಕನಿಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿ, ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಹೊಟೇಲ್ ಮಾಲಕ ಕೆ.ವಿ. ಜಾರ್ಜ್ ಎಂಬವರನ್ನು ಉಪ್ಪಿನಂಗಡಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಜಾರ್ಜ್ ಅವರು ತನ್ನ ಹೊಟೇಲ್‌ನಲ್ಲಿ ಕೆಲಸಕ್ಕಿದ್ದ ಶ್ರೀನಿವಾಸ ಎಂಬವರಿಗೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶ್ರೀನಿವಾಸ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಆರೋಪಿ ಕೆ.ವಿ. ಜಾರ್ಜ್ ಲಾವತ್ತಡ್ಕದ ನಿವಾಸಿ ಕೆ.ಜಿ. ವರ್ಗೀಸ್ ಅವರ ಪುತ್ರನಾಗಿದ್ದು, ಮಂಗಳೂರು- ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯ ಉದನೆ ಬಳಿಯ ಲಾವತ್ತಡ್ಕದಲ್ಲಿ ಹೊಟೇಲ್ ನಡೆಸುತ್ತಿದ್ದಾನೆ. ಕೊಲೆಗೀಡಾಗಿರುವ ಶ್ರೀನಿವಾಸ್ ಅಲ್ಲಿ ಕಾರ್ಮಿಕನಾಗಿದ್ದು, ಹೊಟೇಲ್‌ಗೆ ಬಂದಿದ್ದ ಗಿರಾಕಿಯೋರ್ವರ ಜೊತೆ ಜಗಳ ಆಡಿದ್ದ ಎಂಬ ಕಾರಣಕ್ಕಾಗಿ ಆರೋಪಿಯು ಶ್ರೀನಿವಾಸ್‌ಗೆ ಹಲ್ಲೆ ನಡೆಸಿದ್ದ. ಬಳಿಕ ಶ್ರೀನಿವಾಸ್‌ನನ್ನು ಆರೋಪಿಯೇ ಆಸ್ಪತ್ರೆಗೂ ದಾಖಲಿಸಿದ್ದಲ್ಲದೆ, ಪುತ್ತೂರು ಆಸ್ಪತ್ರೆಗೆ ದಾಖಲಿಸಿದಾಗ ಶ್ರೀನಿವಾಸ್ ಅವರು ಹೊಟೇಲ್‌ನಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದು ಎಂದು ಆರೋಪಿ ಕೆ.ವಿ. ಜಾರ್ಜ್ ಹೇಳಿಕೆ ನೀಡಿದ್ದ. ಬಳಿಕ ಪೊಲೀಸರಿಗೆ ನೀಡಿರುವ ಪ್ರಥಮ ಹೇಳಿಕೆಯಲ್ಲಿ ಅಪರಿಚಿತ ನಾಲ್ವರು ಹಳದಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಬಂದು ತನ್ನ ಸಿಬ್ಬಂದಿ ಶ್ರೀನಿವಾಸ್‌ಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದನಲ್ಲದೆ, ಕಾರಿನ ನೋಂದಣಿ ಸಂಖ್ಯೆಯನ್ನೂ ನೀಡಿದ್ದ. ಹೀಗೆ ಬಗೆ ಬಗೆಯ ಹೇಳಿಕೆ ನೀಡುವ ಮೂಲಕ ಆರೋಪಿಯು ಗೊಂದಲ ಸೃಷ್ಟಿಸಲು ನೋಡಿದ್ದ. ಈತನು ಹೇಳಿದ್ದ ಕಾರನ್ನು ಪೊಲೀಸರು ತನಿಖೆಗೊಳಪಡಿಸಿದಾಗ ಈ ಪ್ರಕರಣಕ್ಕೂ ಆ ಕಾರಿಗೂ ಯಾವುದೇ ಸಂಬಂಧವಿಲ್ಲವೆಂದು ಖಾತ್ರಿಯಾಗಿದ್ದು, ಈತನ ವ್ಯತ್ತಿರಿಕ್ತ ಹೇಳಿಕೆಯಿಂದಾಗಿ ಕೆ.ವಿ. ಜಾರ್ಜ್ ಮೇಲೆಯೇ ಸಂಶಯ ಬಂದು ಈತನನ್ನು ಸೋಮವಾರ ನಸುಕಿನ ಜಾವ ಬಂಧಿಸಿ ತನಿಖೆಗೊಳಪಡಿಸಿದಾಗ ಆರೋಪಿಯು ತಾನೇ ಶ್ರೀನಿವಾಸ್‌ಗೆ ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ವರದಿ: ದೀಪಕ್ ಉಪ್ಪಿನಂಗಡಿ

Related posts

Leave a Reply