Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಹೊರ ರಾಜ್ಯ ಕಾರ್ಮಿಕರು ಅನ್ಯರಲ್ಲ, ಸ್ನೇಹಿತರು ತೂಮಿನಾಡಿನಲ್ಲಿ ಸಹೃದಯ ಸಂಗಮ ಕಾರ್ಯಕ್ರಮ

ಮಂಜೇಶ್ವರ: ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಿರ್ಧೇಶದಂತೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಗ್ರಾ. ಪಂ. ನ ಎರಡನೇ ವಾರ್ಡು ತೂಮಿನಾಡು ಜಂಕ್ಷನ್ ನಲ್ಲಿ ಹೊರ ರಾಜ್ಯ ಕಾರ್ಮಿಕರು ಅನ್ಯರಲ್ಲ : ಸ್ನೇಹಿತರು” ಸಹೃದಯ ಸಂಗಮ ಎಂಬ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಿತು.

ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಪರಿಸರದಲ್ಲಿ ಪ್ರತ್ಯೇಕವಾಗಿಯೂ ಗಡಿ ಪ್ರದೇಶಗಳಲ್ಲಿ ಅನ್ಯ ರಾಜ್ಯದ ಹಿಂದಿ ಭಾಷೆಯನ್ನಾಡುವ ಮಂದಿ ತುಂಬಿ ಹೋಗಿದ್ದಾರೆ. ನಾವು ಹಿಂದಿಯನ್ನು ಕಲಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಸೆಲೂನ್, ಐಸ್ ಕೇಂಡಿ ಮಾರಾಟ, ಕೂಲಿ ಕೆಲಸ ಸೇರಿದಂತೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅನ್ಯ ರಾಜ್ಯ ಕಾರ್ಮಿಕರದ್ದೇ ಮೇಲುಗೈಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಶನ್ ಹೊರ ರಾಜ್ಯದ ಕಾರ್ಮಿಕರನ್ನು ನಮ್ಮ ಸ್ನೇಹಿತರಂತೆ ಅವರ ಜೊತೆಯಾಗಿ ಸೌಹಾರ್ದವನ್ನು ಬೆಳೆಸುವಂತೆ ನಿರ್ಧೇಶಿಸಿರುವುದಾಗಿ ಅವರು ಹೇಳಿದರು.
ಜಿಲ್ಲಾ ಸಾಕ್ಷರತಾ ಕೋರ್ಡಿನೇಟರ್ ವಿ ವಿ ಶ್ಯಾಂ ಲಾಲ್ ಮುಖ್ಯ ಪ್ರಭಾಷಣ ಗೈದರು.

Related posts

Leave a Reply