Header Ads
Breaking News

ಹೊಳೆನರಸೀಪುರ : ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರು ಸಾಗಾಟ

ಹೊಳೆನರಸೀಪುರ: ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿ ಸಹಿತ ಜಾನುವಾರುಗಳನ್ನು ಪೊಲೀಸ್ರು ವಶಪಡಿಸಿಕೊಂಡ ಘಟನೆ ಹೊಳೆನರಸೀಪುರದ ಹಳ್ಳಿ ಮೈಸೂರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಳ್ಳಿ ಮೈಸೂರ್ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ತಡೆದು ಜಾನುವಾರು ಸಹಿತ ಲಾರಿ ಮತ್ತು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಹಳ್ಳಿ ಮೈಸೂರು ಗ್ರಾಮಾಂತರ ಪೊಲೀಸ್ಠಾಣೆಯ ಪಿಎಸ್‍ಐ ಲಕ್ಷ್ಮಣ ಡಿ ಅವರು ತಮ್ಮ ಸಿಬ್ಬಂದಿಗಳಾದ ಸಣ್ಣ ಮಲ್ಲಯ್ಯ ಜಯರಾಮ ಧರಣೀಶ್ ಕುಮಾರ್ ಅಶೋಕ್ ಗವಿರಂಗಪ್ಪ ರವಿ ಗೌಡ ಕೆ ಎಂ ಅವರು ರಾತ್ರಿ 2:00 ಸಮಯದಲ್ಲಿ ಓಡನಹಳ್ಳಿ ವೃತ್ತದಲ್ಲಿ ಲಾರಿ ಬರುವುದನ್ನು ಕಾಯುತ್ತಿದ್ದರು. ಲಾರಿ ಚಾಲಕ ಪೊಲೀಸ್ ಜೀಪನ್ನು ನೋಡಿ ವೇಗವಾಗಿ ಚಲಿಸಲು ಪ್ರಯತ್ನಿಸಿದ್ದಾನೆ. ಅದೇ ವೇಳೆ ಪೊಲೀಸ್ರು ಅಡ್ಡಗಟ್ಟಿ ವಿಚಾರಣೆ ಮಾಡಿದಾಗ ಜಾನುವಾರು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಾಹನದಲ್ಲಿ ಒಟ್ಟು 38 ರಾಸುಗಳನ್ನು ತುಂಬಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪಿಎಸ್‍ಐ ಅವರು ರಾಸುಗಳನ್ನು ಮೈಸೂರಿನ ಗೋಶಾಲೆಗೆ ಬಿಡುವುದಾಗಿ ತಿಳಿಸಿದ್ದಾರೆ. ಮೈಸೂರು ಗ್ರಾಮದ ವ್ಯಕ್ತಿಯೊಬ್ಬರು ರಾಸುಗಳಿಗೆ ಹುಲ್ಲು ನೀರು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ವಾಹನದ ಚಾಲಕ ಇಮ್ರಾನ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಇದೇ ವೇಳೆ ಎಎಸ್‍ಐ ಗಳಾದ ಯತೀಶ್ ನಾಗರಾಜ್ ಪೇದೆಗಳಾದ ಪಾಲಾಕ್ಷ ಗುರುಸಿದ್ಧ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *