Header Ads
Breaking News

ಹೊಳೆನರಸೀಪುರ ಪುರಸಭೆಯ ಬಜೆಟ್‍ನ ಪೂರ್ವಭಾವಿ ಸಭೆ : ಸಭೆಯಲ್ಲಿ ಹರಿದು ಬಂದ ಸಮಸ್ಯೆಗಳ ಮಹಾಪೂರ

ಹೊಳೆನರಸೀಪುರ: ಕ್ಷೇತ್ರದ ಶಾಸಕರು ಕೋಟಿ ಕೋಟಿ ಅನುದಾನ ತಂದರೂ ಕೂಡ ಪಟ್ಟಣದ ಅಭಿವೃದ್ಧಿ ಕೇವಲ ಮರೀಚಿಕೆಯಾಗಿ ಉಳಿದಿದೆ ಎನ್ನುವುದು ಬಜೆಟ್‍ನ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾಗಿ ಸಮಸ್ಯೆಗಳ ಮಹಾಪೂರವೇ ಹರಿದು ಬಂದಿತು.

ಪುರಸಭೆಯ ವತಿಯಿಂದ 20-21 ನೇ ಸಾಲಿನ ಆಯವ್ಯಯದ ಬಜೆಟ್ ನ ಪೂರ್ವಭಾವಿ ಸಭೆ ಪುರಸಭೆ ಸಭಾಂಗಣದಲ್ಲಿ ನಡೆಯಿತು. ಹಿರಿಯ ಸದಸ್ಯೆ ಜಿ.ಕೆ.ಸುಧಾ ನಳಿನಿ ಸಭೆಯ ಆರಂಭದಲ್ಲಿ ಆಹ್ವಾನ ಪತ್ರಿಕೆಯ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿ ಇದರಲ್ಲಿ ಪುರಸಭಾ ಅಧ್ಯಕ್ಷರ ಸಹಿಯಿಲ್ಲ ಅದರೂ ಕೂಡ ಎಲ್ಲಾ ಸದಸ್ಯರಿಗೆ ಅಹ್ವಾನ ಪತ್ರಿಕೆಯನ್ನು ತಲುಪಿಸಿದ್ದೀರ ಎಂದು ಅಸಮಧಾನ ವ್ಯಕ್ತ ಪಡಿಸಿದರು.

ಪುರಸಭಾ ಸದಸ್ಯ ಪ್ರಸನ್ನ ಮಾತನಾಡಿ ಪಟ್ಟಣದ ಅಭಿವೃದ್ಧಿಗೆ ನೀವುಗಳು ಎಷ್ಟು ಅಂದಾಜು ಪಟ್ಟಿ ತಯಾರಿಸಿದ್ದೀರಿ ಈಗಿರುವ ಹಣ ಎಷ್ಟು ಎಂದು ಕೇಳಿದಾಗ, ಇದಕ್ಕೆ ಉತ್ತರಿಸಿದ ಪುರಸಭಾ ಪ್ರಭಾರ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ಮಾತನಾಡಿ ಸರ್ಕಾರದಿಂದ 18 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದೇವು. ಅದರೇ ಸರ್ಕಾರದಿಂದ ಒಂದು ನಯಾಪೈಸೆ ಹಣವೂ ಬಿಡುಗಡೆಯಾಗಿಲ್ಲ ಅದುದರಿಂದ ಅಭಿವೃದ್ಧಿ ಕುಂಟಿತವಾಗಿದೆ. ಪುರಸಭೆಯಿಂದ ಬರುವ ಆದಾಯ ನೌಕರರಿಗೆ ಮತ್ತು ಇತರೇ ಖರ್ಚಿಗೆ ಸರಿಯಾಗಿದೆ ಎಂದು ತಿಳಿಸಿದರು,.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಸಿ.ಜಿ.ವೀಣಾ ರಾಜೇಶ್,ಉಪಾಧ್ಯಕ್ಷರಾದ ಜಿ.ತ್ರಿಲೋಚನಾ ಸೋಮೇಶ್, ಮತ್ತು ಎಲ್ಲಾ ಪುರಸಭಾ ಸದಸ್ಯರು. ಮತ್ತು ಪುರಸಭೆಯ ಅಧಿಕಾರಿವೃಂದದವರು,ನೌಕರರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.

Related posts

Leave a Reply

Your email address will not be published. Required fields are marked *