Header Ads
Breaking News

ಹೊಸಂಗಡಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸಭೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಜೇಶ್ವರ ಸಂಯುಕ್ತ ಜಮಾಅತ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯು ಹೊಸಂಗಡಿ ಮಹಾತ್ಮಾ ಗಾಂಧೀ ನಗರದಲ್ಲಿ ನಡೆಯಿತು.ಸಂಯುಕ್ತ ಜಮಾಅತ್ ಸಮಿತಿ ಅಧ್ಯಕ್ಷ ಸಯ್ಯಿದ್ ಅತಾವುಲ್ಲಾ ತಂಙಳ್ ಅಧ್ಯಕ್ಷತೆಯಲ್ಲಿ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕ್ಕೋಯ ತಂಘಳ್ ಉದ್ಘಾಟಿಸಿದರು.

ಅನ್ವರ್ ಅಲಿ ಹುದವಿ ಮಾತನಾಡಿ, ಮಾತನಾಡಿದ ಅವರು ಭಾರತ ದೇಶದ ಸಂಸ್ಕೃತಿ , ಅಖಂಡತೆ, ಸೌಹಾರ್ಧತೆಯನ್ನು ಒಡೆಯಲು ಮೋದಿ ನೇತೃತ್ವದ ಸರಕಾರ ಯತ್ನಿಸುತ್ತಿದೆ, ದೇಶದಲ್ಲಿ ಎಲ್ಲಾ ಧರ್ಮಗಳ ಜನರು ಸೌಹಾರ್ಧತೆಯಿಂದ ಬದುಕುತ್ತಿದ್ದಾರೆ. ಆದರೆ ಮೋದಿ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಮುಸ್ಲಿಮರನ್ನು ದಮನಿಸಲು ಯತ್ನಿಸುತ್ತಿದೆ. ಇದರ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್, ಫಾಧರ್ ವರ್ಗೀಸ್, ಹ?ದ್ ವರ್ಕಾಡಿ, ಅಬ್ದುಲ್ ಅಝೀಝ್ ಹಾಜಿ, ಮಾಜಿ ಶಾಸಕ ಸಿ,ಎಚ್ಚ್ ಕುಞ್ಞಂಬು, ನ್ಯಾಯವಾದಿ ಕೆ.ಕೆ ರಾಜೇಂದ್ರನ್, ಸಿ.ಟಿ ಸುಲೈಮಾನ್ ಹಾಗೂ ಮತ್ತಿತರರು ಪಾಳ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *