Header Ads
Breaking News

ಹೊಸಂಗಡಿಯ ಮುಸ್ಲಿಯಾರ್ ಮೇಲೆ ಹಲ್ಲೆ ಪ್ರಕರಣ:ಮಂಜೇಶ್ವರ ಮುಸ್ಲಿಂ ಯೂತ್ ಲೀಗ್ ವತಿಯಿಂದ ನಡೆದ ಪ್ರತಿಭಟನೆ

ಮಂಜೇಶ್ವರ : ಹೊಸಂಗಡಿ ಅಂಗಡಿಪದವಿನ ಎಚ್.ಪಿ.ಕ್ವಾರ್ಟನ ಶೇಕ್ ಸರ್ಫುದ್ದೀನ್ ಮುಸ್ಲಿಯಾರ್(36) ಅವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ ಮಂಜೇಶ್ವರದ ಮುಸ್ಲಿಂ ಯೂತ್ ಲೀಗ್ ವತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು. ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಪಂ.ಧ್ಯಕ್ಷ ಮುಕ್ತಾರ್ ಎ. ಅಧ್ಯಕ್ಷತೆ ವಹಿಸಿದರು. ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಎಕೆಎಂ ಅಶ್ರಫ್ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿದರು.ನೇತಾರರಾದ ರಹ್ಮತುಲ್ಲ ಸಾಹಿಬ್, ಅಬ್ದುಲ್ಲ ಕಜೆ, ಮೊಯಿದೀನ್ ಪ್ರಿಯ, ಸೈಫುಲ್ಲ ತಂಘಲ್, ಗೋಲ್ಡನ್ ರಹ್ಮಾನ್, ಮುಸ್ತಫ ಉದ್ಯಾವರ ಮೊದಲಾದವರು ಪ್ರತಿಭಟನೆಗೆ ಮುಂದಾಳತ್ವ ನೀಡಿದರು. ಅದೇ ರೀತಿ ಮುಸ್ಲಿಯಾರ್ ನ ಹಲ್ಲೆಯನ್ನು ಖಂಡಿಸಿ ಎಸ್ ಡಿ ಪಿ ಐ ಮಂಜೇಶ್ವರ ವಲಯ ಸಮಿತಿ ಹೊಸಂಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಹಲ್ಲೆಗೈದ ಆರೋಪಿಗಳನ್ನು ಹಾಗೂ ಹಲ್ಲೆಗೆ ಗೂಢಾಲೋಚನೆ ನಡೆಸಿದವರನ್ನೂ ಕೂಡಾ ಕಾನೂನಿನ ಮುಂದೆ ತರಬೇಕೆಂದು ಕಾನೂನು ಪಾಲಕರನ್ನು ಎಸ್‌ಡಿಪಿಐ ನೇತಾರರು ಒತ್ತಾಯಿಸಿದರು. ಇನ್ನು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಂಗಡಿಪದವು ಪರಿಸರ ನಿವಾಸಿ ಮುಖೇಶ್ ಸಹಿತ ಆರು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Related posts

Leave a Reply

Your email address will not be published. Required fields are marked *