Header Ads
Breaking News

ಹೊಸಂಗಡಿ: ಹಿರಿಯ ಸಾಮಾಜಿಕ ಮುಂದಾಳು ಬಿ.ಮೊಹಮ್ಮದ್‌ರಿಗೆ ಶ್ರದ್ಧಾಂಜಲಿ ಸಭೆ

ಮಂಜೇಶ್ವರ: ಇತ್ತೀಚಿಗೆ ನಿಧನರಾದ ಹಿರಿಯ ಸಾಮಾಜಿಕ ಮುಂದಾಳು ಹಾಗೂ ಕೇರಳ ವ್ಯಾಪಾರಿ ಏಕೋಪನ ಸಮಿತಿ ಸಂಘಟನೆ ಮಂಜೇಶ್ವರ ಘಟಕದ ಸ್ಥಾಪಕಾ ನೇತಾರ ಬಿ.ಮೊಹಮ್ಮದ್ ಶ್ರದ್ಧಾಂಜಲಿ ಸಭೆಯು ಹೊಸಂಗಡಿ ಗೇಟ್ ವೇ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವ್ಯಾಪಾರಿ ವ್ಯವಸಾಯ ಏಕೋಪನ ಸಮಿತಿ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದರು.


ಸಿಪಿಎಂ ಹಿರಿಯ ಮುಂದಾಳು ಕೆ ಆರ್ ಜಯಾನಂದ ಶ್ರದ್ದಾಂಜಲಿ ಸಭೆಯನ್ನು ಉದ್ಘಾಟಿಸಿದರು. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ, ಮಂಜೇಶ್ವರ ಅಭಿವೃದ್ದಿ ಸಮಿತಿ, ಮಂಜೇಶ್ವರ ಗ್ರಾಹಕರ ವೇದಿಕೆ ಸೇರಿದಂತೆ ಹಲವು ಸಂಘಟನೆಗಳಲ್ಲೂ ಇವರು ಸಕ್ರಿಯವಾಗಿ ಸೇವೆಯನ್ನು ನೀಡಿದ್ದರು. ವಿವಿಧ ರಾಜಕೀಯ ಮುಖಂಡರುಗಳಾದ ಬಿ.ವಿ ರಾಜನ್ , ಕೆ.ಆರ್ ಜಯಾನಂದ , ಸತೀಶ್ ಅಡಪ ಸಂಕಬೈಲು , ಇಕ್ಬಾಲ್ , ಯಾಕೂಬ್ ಕುಂಜತ್ತೂರು , ಆರಿಫ್ ಮಚ್ಚಂಪಾಡಿ , ಸೊಸೈಟಿಯ ಕಾರ್ಯದರ್ಶಿ ನಾರಾಯಣ , ವ್ಯಾಪಾರಿ ಕಾರ್ಯದರ್ಶಿ ಹಮೀದ್ ಸೇರಿದಂತೆ ಹಲವರು ಮಾತನಾಡಿದರು.

Related posts

Leave a Reply

Your email address will not be published. Required fields are marked *