

ಧಾರವಾಡ ಜಿಲ್ಲೆಯ ಹೊಸಕಟ್ಟಿ ಗ್ರಾಮದ ಪ್ರವೀಣ ಕುಮಾರ ತಳವಾರ ಎಂಬವರ ಹೊಲದಲ್ಲಿ ಅಪರೂಪದ ಚಿಪ್ಪು ಹಂದಿಯೊಂದು ಪತ್ತೆಯಾಗಿದ್ದು ಅಲ್ಲಿದ್ದವರಲ್ಲಿ ಆಶ್ಚರ್ಯ ಮೂಡಿಸಿದೆ. ಸೆರೆಸಿಕ್ಕ ಅಪರೂಪದ ಚಿಪ್ಪು ಹಂದಿ ಯನ್ನು ಅದೆ ಗ್ರಾಮದ ವನ್ಯಜೀವಿ ಸಂರಕ್ಷಕರಾದ ಅಡಿವಪ್ಪ ನಾಗಪ್ಪ ತಳವಾರ ಎಂಬುವವರು ಹಿಡಿದು ಸುರಕ್ಷಿತ ವಾಗಿ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ ಎಂದು ತಿಳಿದುಬಂದಿದೆ.