Header Ads
Breaking News

ಹೊಸಬೆಟ್ಟುವಿನ ಶ್ರೀ ರಾಘವೇಂದ್ರ ಸ್ವಾಮಿ ಮಠ : 11ನೇ ವರ್ಷದ ಧನುರ್ಮಾಸ ಪೂಜೆ

ಹೊಸಬೆಟ್ಟುವಿನಲ್ಲಿ ನವ ವೃಂದಾವನ ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜನವರಿ 12ರಂದು ವಾಯುಸ್ತುತಿ ಪುರಶ್ಚರಣ ಹೋಮ, 108 ಕಲಶ ಪ್ರತಿಷ್ಠಾಪನಾಪೂರ್ವಕ ಶ್ರೀ ಶನೈಶ್ವರ ಪೂಜಾ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ, ಪ್ರತಿಷ್ಠಾನದ ಅಧ್ಯಕ್ಷ ರಾಘವೇಂದ್ರ ಎಚ್.ವಿ. ಹೇಳಿದರು.
ಅವರು ಸುರತ್ಕಲ್‍ನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜನವರಿ 12ರಂದು 11 ನೇ ವರ್ಷದ ಧನುರ್ಮಾಸ ಪೂಜಾ ಕಾರ್ಯಕ್ರಮ ವಾಯುಸ್ತುತಿ ಪುರಶ್ವರಣ ಹೋಮ, ನವಗ್ರಹಗಳಿಗೆ ಪೂಜಾ ಕಾರ್ಯಕ್ರಮ, ಶನಿ ಶಾಂತಿ ಹೋಮವು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಪಾಲ್ಗೊಂಡು ಸೇವೆ ಸಲ್ಲಿಸಿ ಹರಿವಾಯು ಗುರುಗಳು, ಶ್ರೀ ಪಂಚಮುಖೀ ಆಂಜನೇಯ ದೇವರ ಮತ್ತು ಶ್ರೀ ಶನೈಶ್ವರ ದೇವರ ಕೃಪೆಗೆ ಪಾತ್ರರಾಗಿ ಎಂದು ಹೇಳಿದರು.
ಆನಂತರ ಪ್ರತಿಷ್ಠಾನದ ಉಪಾಧ್ಯಕ್ಷೆ ಕೆ. ಕಲಾವತಿ ಅವರು ಮಾತನಾಡಿ, ನವ ವೃಂದಾವನ ಸೇವಾ ಪ್ರತಿಷ್ಟಾನ 1997ರಲ್ಲಿ ಸ್ಥಾಪನೆಗೊಂಡಿತು. ಕೀರ್ತಿಶೇಷ ಹರಿದಾಸ ರತ್ನ ಎಚ್. ವಾದೀಶಾಚಾರ್ಯ ರವರು ಅದರ ಸ್ಥಾಪಕ ಅಧ್ಯಕ್ಷತೆಯಲ್ಲಿ ಹೊಸಬೆಟ್ಟು ಪರಿಸರದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಸ್ಥಾಪನೆಯಾಗಿದೆ. ಈಗಾಗಲೇ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಶ್ರೀ ರಾಘವೇಂದ್ರ ಮಠದಲ್ಲಿ ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದ ಅವರು ಜ.12ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ವೃಂದಾವನ ನಗರ ಹಿತ ವೇದಿಕೆಯ ಉಪಾಧ್ಯಕ್ಷರಾದ ಆನಂದ್ ಪಿ.ಹೆಚ್. ಪ್ರತಿಷ್ಠಾನದ ಟ್ರಸ್ಟಿ ಹರಿಕೃಷ್ಣ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *