Header Ads
Header Ads
Breaking News

ಹೊಸ್ಮಠ ಹಳೆ ಸೇತುವೆ ರಸ್ತೆ ಕುಸಿತ ರಸ್ತೆ ಸಂಚಾರದಲ್ಲಿ ತಡೆ

ಭಾರೀ ಪ್ರಮಾಣದ ನೀರಿ ಹರಿದ ಪರಿಣಾಮ ರಸ್ತೆ ಕುಸಿತಕಡಬ ಸಮೀಪದ ಹೊಸ್ಮಠ ಹಳೆ ಸೇತುವೆಯ ಬಳಿ ರಸ್ತೆ ಭಾಗಶ: ಕುಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರದಲ್ಲಿ ತಡೆಯುಂಟಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಪ್ರತೀ ಮಳೆಗಾಲದಲ್ಲಿ ಮುಳುಗಡೆ ಸೇತುವೆ ಎಂದೇ ಪ್ರಚಲಿತದಲ್ಲಿರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಹೊಸ್ಮಠ ಹಳೆ ಸೇತುವೆ ಬಳಿ ಕುಸಿತ ಸಂಭವಿಸಿದೆ. ಮುಳುಗು ಸೇತುವೆಗೆ ಪರ್ಯಾಯವಾಗಿ ಅದರ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆ ಸೇತುವೆಯ ಬದಿಯಿಂದ ನೀರನ್ನು ಹೊರಹರಿಯಲು ಬಿಡಲಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಇಂದು ಮುಂಜಾನೆ ಸೇತುವೆ ಬಳಿ ರಸ್ತೆ ಕುಸಿದಿದೆ.

Related posts

Leave a Reply