Breaking News

ಹೊಸ ಉಪರಾಷ್ಟ್ರಪತಿ ಆಯ್ಕೆ, ಆಗಸ್ಟ್ ೫ರಂದು ಚುನಾವಣೆ

ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ ೫ರಂದು ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಹೇಳಿದ್ದಾರೆ.
ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿ ಅವರ ಅವಧಿಯು ಆಗಸ್ಟ್ ೧೦ರಂದು ಕೊನೆಗೊಳ್ಳಲಿದೆ. ಕಳೆದ ಬಾರಿ ಹರಿಯಾಣದ ರಾಜ್ಯಸಭಾ ಸದಸ್ಯರ ಚುನಾವಣೆ ವೇಳೆ ಮತಪತ್ರದಲ್ಲಿ ಗುರುತು ಹಾಕಲು ಬಳಸಿದ್ದ ಮಸಿ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಆ ಚುನಾವಣೆಯಲ್ಲಿ ಮತಪತ್ರದಲ್ಲಿ ಗುರುತು ಹಾಕಲು ವಿಶೇಷ ಪೆನ್ಗಳನ್ನು ಬಳಸಲು ನಿರ್ಧರಿಸಲಾಗಿತ್ತು. ಉಪರಾಷ್ಟ್ರಪತಿ ಚುನಾವಣೆಯಲ್ಲೂ ಮಸಿ ಬದಲಿಗೆ ವಿಶೇಷ ಪೆನ್ಗಳನ್ನೇ ಬಳಸಲಾಗುತ್ತದೆ. ಆ ಪೆನ್ಗಳ ಹೊರತಾಗಿ ಬೇರೆ ಪೆನ್ನಲ್ಲಿ ಮತ ಗುರುತು ಹಾಕಿದ್ದರೆ, ಅಂತಹ ಮತಪತ್ರಗಳನ್ನು ಅನರ್ಹಗೊಳಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

Related posts

Leave a Reply