Header Ads
Breaking News

ಹೊಸ ದಾಖಲೆ ಬರೆದ ಖ್ಯಾತ ಕಂಬಳ ಓಟಗಾರ ಶ್ರೀನಿವಾಸ ಗೌಡ ಅಶ್ವಥಪುರ

ಶ್ರೀ ರಾಮಾಂಜನೆಯ ಗೆಳೆಯರ ಬಳಗ ಮೈರ ಇದರ ಆಶ್ರಯದಲ್ಲಿ ಕಕ್ಯಪದವಿನ ಮೈರ-ಬರ್ಕೆಜಾಲುವಿನಲ್ಲಿ ನಡೆದ 8ನೇ ವರ್ಷದ ಸತ್ಯಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ಖ್ಯಾತ ಕಂಬಳ ಓಟಗಾರ ಶ್ರೀನಿವಾಸ ಗೌಡ ಅಶ್ವಥಪುರ ಅವರು ತನ್ನದೇ ಹೆಸರಿನಲ್ಲಿದ್ದ ಹಳೆ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳದಲ್ಲಿ ಅವರು 100 ಮೀಟರನ್ನು 8.96 ಸೆಕೆಂಡ್‍ಗಳಲ್ಲಿ ಗುರಿ ತಲುಪಿ ತನ್ನ ದಾಖಲೆ ಬರೆದಿದ್ದರು. ಇದೀಗ ಮೈರದ ಸತ್ಯ-ಧರ್ಮ ಜೋಡುಕರೆ ಕಂಬಳದಲ್ಲಿ 100 ಮೀಟರನ್ನು 8.78 ಸೆಕೆಂಡೆಗಳಲ್ಲಿ ಕ್ರಮಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ಅವರ ಹಗ್ಗ ಹಿರಿಯ ವಿಭಾಗದ ಫೈನಲ್ ಪಂದ್ಯದಲ್ಲಿ ಶ್ರೀನಿವಾಸ್ ಗೌಡ ಅವರು ಈ ಸಾಧನೆ ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *