Header Ads
Header Ads
Header Ads
Breaking News

ಹೊಸ ವರ್ಷಕ್ಕೆ ಅಪಘಾತದ ಸ್ವಾಗತ ರಾ.ಹೆ.66 ಪಂಪ್‌ವೆಲ್ ರಸ್ತೆ ಮಧ್ಯೆ ಉರುಳಿದ ಸುಮೋ ಪವಾಡಸದೃಶ ಪಾರಾದ ಪ್ರಯಾಣಿಕರು

ಹೊಸ ವರ್ಷದ ಸ್ವಾಗತದ ಆಚರಣೆ ಜೋರಾಗಿದ್ದ ಮಂಗಳೂರಿನಲ್ಲಿ, ಐವರಿದ್ದ ಟಾಟ ಸುಮೋ ವಾಹನ ರಸ್ತೆ ಮಧ್ಯದಲ್ಲೇ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ನಗರದ ಪಂಪ್‌ವೆಲ್ ಕರ್ಣಾಟಕ ಬ್ಯಾಂಕ್ ಎದುರುಗಡೆ ಕುಂದಾಪುರದಿಂದ ಪಂಪ್ ವೆಲ್ ಕಡೆಗೆ ಬರುತ್ತಿದ್ದ ಟಾಟ ಸುಮೋ ವಾಹನ ಎದುರುಗಡೆಯಿಂದ ವಿರುದ್ಧ ಧಿಕ್ಕಿನಲ್ಲಿ ಬಂದ ಬೈಕನ್ನು ತಪ್ಪಿಸುವ ಧಾವಂತದಲ್ಲಿ ರಸ್ತೆ ಮಧ್ಯವೇ ಪಲ್ಟಿಯಾಗಿದೆ.

ಸುಮೋ ವಾಹನದಲ್ಲಿ ಕೇರಳ, ಹಾಸನ, ಚಿಕ್ಕಮಗಳೂರು ನಿವಾಸಿಗಳಾದ ಮಂಜು, ಸುಧೀಶ್, ಶಂಕರ್ ಸೇರಿದಂತೆ ಇನ್ನಿಬ್ಬರು ಇದ್ದು, ಎಲ್ಲರೂ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ಸುಮೋ ವಾಹನದಲ್ಲಿದ್ದವರು ಎನ್ ಎಫ್ ಎಸ್ ಕಂಪೆನಿಯ ಕಾರ್ಮಿಕರಾಗಿದ್ದು, ಕುಂದಾಪುರದಲ್ಲಿ ಟೆಲಿಫೋನ್ ಕೇಬಲ್ ಕೆಲಸ ಮುಗಿಸಿ ಮಂಗಳೂರು ಕಡೆಗೆ ವಾಪಸ್ಸಾಗುತ್ತಿದ್ದಾಗ ಘಟನೆ ನಡೆದಿದೆ.

Related posts

Leave a Reply