Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : ಹೊಸ ವಿನ್ಯಾಸದ ಕರಕುಶಲ ಮಳಿಗೆ

ಬಳಸಿದ ಬಟ್ಟೆಗಳಿಗೆ ಹೊಸವಿನ್ಯಾಸದ ಸ್ಪರ್ಶ ನೀಡಿ ಮಾರಾಟದ ಸರಕಾಗಿಸಬಹುದು ಎಂಬುದನ್ನು ನಿರೂಪಿಸುವ ಮಳಿಗೆ ಈ ಸಲದ ಲಕ್ಷದೀಪೋತ್ಸವ ವಸ್ತುಪ್ರದರ್ಶನ ಪ್ರಾಂಗಣದ ಪ್ರಮುಖ ಆಕರ್ಷಣೆ. ಈ ಮಳಿಗೆಯಲ್ಲಿ ವೇಸ್ಟ್ ಬಟ್ಟೆಗಳಿಂದ ಸಿದ್ಧಪಡಿಸಿದ ಕರಕುಶಲ ವಸ್ತುಗಳಿವೆ. ವಿವಿಧ ಬಗೆಯ ಬ್ಯಾಗ್‌ಗಳಿವೆ. ವಿವಿಧ ವಿನ್ಯಾಸದ ಮ್ಯಾಟ್‌ಗಳಿವೆ. ಈ ಮಳಿಗೆಯನ್ನು ನಿರ್ವಹಿಸುತ್ತಿರುವವರು 58 ವರ್ಷದ ಭುವನೇಶ್ವರಿ ಸಗದೇವ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದವರಾದ ಇವರು ಸುಮಾರು ಇಪ್ಪತ್ತು ವರ್ಷದಿಂದ ತಮ್ಮ ಜೀವನ ಉಪಯೋಗಕ್ಕಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಅವರ ಕೆಲಸ ವೇಸ್ಟ್ ಬಟ್ಟೆಗಳಿಂದ ಬ್ಯಾಗನ್ನು ತಯಾರಿಸುವುದು. ಅವರಿಗೆ ಅದೇ ದುಡಿಮೆ. ಖರ್ಚು-ವೆಚ್ಚವನ್ನೆಲ್ಲ ಬದಿಗಿಟ್ಟು ಲೆಕ್ಕ ಹಾಕುವುದಾದರೆ ದಿನಕ್ಕೆ ಸುಮಾರು 40 ರಿಂದ 50 ಬ್ಯಾಗುಗಳನ್ನು ಹೊಲಿಯುತ್ತಾರೆ. ಅಲ್ಲೇ ವ್ಯಾಪಾರ ಕೂಡ ಮಾಡುತ್ತಾರೆ. ಒಂದು ಬ್ಯಾಗಿಗೆ 40 ರಿಂದ 30 ರೂಪಾಯಿ. ದಿನಕ್ಕೆ ೪೫೦ ರಿಂದ ೫೦೦ ದುಡಿಯುತ್ತಾರೆ. ಅವರು ಕಲರ್ ಕಲರ್ ಬಟ್ಟೆಗಳಿಂದ ಹೊಲಿಯುತ್ತಿದ್ದ ಮನೆಯಲ್ಲಿ ಹಾಖುವ ನೆಲದ ಮ್ಯಾಟ್ ಹಾಗೂ ಬ್ಯಾಗ್ ಅಲ್ಲಿ ಎಲ್ಲರ ಗಮನ ಸೆಳೆಯುತ್ತಿತ್ತು.
ಅದನ್ನು ನೋಡಿದ ಜನರು ತಮ್ಮ ಮನೆಗೆ ಖುಷಿಯಲ್ಲಿ ತಕ್ಷಣವೇ ಒಂದು ಎರಡು ಬ್ಯಾಗನ್ನು ಖರೀದಿ ಮಾಡುತ್ತಿದ್ದರು. ಈಗಿನ ಕಾಲದಲ್ಲಿ ಜನರು ವೇಸ್ಬ್ ಬಟ್ಟೆಯನ್ನು ಕಸದಲ್ಲಿ ಹಾಕುತ್ತಾರೆ ಆದರೆ ಈ ಅಜ್ಜಿ ಅದನ್ನೇ ಉಪಯೋಗಿಸಿ ಸುಮಾರು 40 ಬ್ಯಾಗುಗಳನ್ನು ಹೊಲಿಯುತ್ತಾರೆ. ಕೌಟುಂಬಿಕ ಸಂಕಷ್ಟಗಳ ನಡುವೆಯೂ ತಮ್ಮ ಕರಕುಶಲ ನೈಪುಣ್ಯದಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *