Header Ads
Header Ads
Breaking News

ಹೋಬಳಿ ಮಟ್ಟದಲ್ಲಿ ರಾಜ್ಯದ ಪ್ರಥಮ ಇಂದಿರಾ ಕ್ಯಾಂಟಿನ್ ಉಳ್ಳಾದ ತೊಕ್ಕೊಟ್ಟು ಬಸ್ ನಿಲ್ದಾಣದ ಸಮೀಪ ಉದ್ಘಾಟನೆ

ಉಳ್ಳಾಲ: ರಾಜ್ಯದಲ್ಲಿ ಶೇಖರಣೆಯಾದ ಸಂಪತ್ತನ್ನು ಕೆಲವರು ಮಾತ್ರ ಬಳಸಿಕೊಳ್ಳುವುದು ಬೇಡ, ಅದು ಎಲ್ಲ ವರ್ಗದ ಎಲ್ಲರಿಗೂ ಸಂದಬೇಕು ಎಂಬ ನೆಲೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯಸರಕಾರ ಮೊತ್ತ ಮೊದಲ ಬಾರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಹಸಿವು ಮುಕ್ತ ಕರ್ನಾಟಕವೇ ನಮ್ಮ ಗುರಿ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಹೋಬಳಿ ಮಟ್ಟದಲ್ಲಿ ರಾಜ್ಯದ ಪ್ರಥಮ, ಉಳ್ಳಾಲ ಪುರಸಭೆ ವ್ಯಾಪ್ತಿಯ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ’ಇಂದಿರಾ ಕ್ಯಾಂಟಿನ್’ ನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಕಡಿಮೆ ವೇತನಕ್ಕೆ ದುಡಿಯುವವರ ಹೊಟ್ಟೆ ತುಂಬಬೇಕು. ಗುಣಮಟ್ಟದ ಕಟ್ಟಡ ಹಾಗೂ ಆಹಾರದಲ್ಲಿ ಗುಣಮಟ್ಟ ಕಾಪಾಡಲಾಗಿದೆ. ಈ ಭಾಗದಲ್ಲಿ ಕುಚ್ಚಲ ಅಕ್ಕಿ, ಪಲ್ಯ, ಉಪ್ಪಿನ ಕಾಯಿ ಜೊತೆ ಅನ್ನಸಾಂಬಾರು ಒದಗಿಸಲಿದ್ದಾರೆ. ಇಮೋಫೇಲಿಯಾಕ್ಕೆ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಉಚಿತ ಹಾಗೂ ಎಪಿಎಲ್ ನವರಿಗೆ ಎಪ್ಪತ್ತು ಶೇ. ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಕ್ಪ್ ಜಿಲ್ಲಾಧ್ಯಕ್ಷ ಯು.ಕೆ. ಮೋನು, ಅಲ್ಪಸಂಖ್ಯಾತ ನಿಗಮ ಜಿಲ್ಲಾಧ್ಯಕ್ಷ ಎನ್. ಎಸ್. ಕರೀಂ, ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಆರೀಪ್ ಉಳ್ಳಾಲ