Header Ads
Breaking News

ಹ್ಯಾಪಿ ನ್ಯೂ ಇಯರ್ ಬರೆಯುತ್ತಿದ್ದಾಗ ಅಪಘಾತ : ಕಾರ್ಕಳ ತಾಲೂಕಿನ ಮಿಯಾರು ಗ್ರಾಮದಲ್ಲಿ ನಡೆದ ಘಟನೆ

ಹೊಸ ವರ್ಷದ ಶುಭಾಶಯ ಹ್ಯಾಪಿ ನ್ಯೂ ಇಯರ್2021 ಎಂದು ರಸ್ತೆಯಲ್ಲಿ ಬರೆಯುವ ವೇಳೆ ವೇಗವಾಗಿ ಬರುತ್ತಿದ್ದ ಈಕೋ ಕಾರು ಡಿಕ್ಕಿ ಹೊಡೆದು ಬಿಜಾಪುರ ಮೂಲದ ಶರಣಪ್ಪ ಗೌಡರ್, ಹಾಗೂ ಸಿದ್ದಪ್ಪ ಮೃತರಾದ ಘಟನೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಕುಂಟಿ ಬೈಲು ಸಮೀಪ ನಡೆದಿದೆ. ಶರಣಪಗೌಡ ಸ್ಥಳದಲ್ಲಿ ಮೃತರಾದರೆ, ಸಿದ್ದಪ್ಪ ತುರ್ತು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ ಕೊಂಡೊಯ್ಯುವಾಗ ದಾರಿ ಮಧ್ಯ ಮೃತಪಟ್ಟಿದ್ದಾರೆ. ಅಪಘಾತ ನಡೆದ ಕೆಲ ವೇಳೆ ಯುವಕರಿಬ್ಬರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *