Breaking News

116 ಜನರಿದ್ದ ಮ್ಯಾನ್ಮಾರ್ ಸೇನಾ ವಿಮಾನ, ಅವಶೇಷ ಅಂಡಮಾನ್ ಸಮುದ್ರದಲ್ಲಿ ಪತ್ತೆ

ಸೈನಿಕರು ಮತ್ತು ಅವರ ಕುಟುಂಬದವರು ಸೇರಿದಂತೆ ೧೧೬ ಮಂದಿಯನ್ನು ಹೊತ್ತ ಮ್ಯಾನ್ಮಾರ್ ಸೇನಾ ವಿಮಾನದ ಅವಶೇಷ ಬುಧವಾರ ಸಂಜೆ ಅಂಡಮಾನ್ ಸಮುದ್ರದಲ್ಲಿ ಪತ್ತೆಯಾಗಿದೆ.
ದವೇ ನಗರದಿಂದ ೨೧೮ ಕಿಲೋ ಮೀಟರ್ ದೂರದಲ್ಲಿರುವ ಸಮುದ್ರದಲ್ಲಿ ವಿಮಾನದ ಬಿಡಿ ಭಾಗಗಳು ಸಿಕ್ಕಿವೆ ಎಂದು ಮೈಯಿಕ್ ನಗರದ
ಪ್ರವಾಸೋದ್ಯಮ ಇಲಾಖೆ ಅಧಿಕಾರಿ ನೈಂಗ್ ಲಿನ್ ಝಾವ್ ತಿಳಿಸಿದ್ದಾರೆ. ಮೈಯಿಕ್ ಹಾಗೂ?ಯಾಂಗೂನ್ ನಡುವಿನ ಮಾರ್ಗದಲ್ಲಿ ಸಂಚರಿಸುವ ವೇಳೆ ಬುಧವಾರ ಮಧ್ಯಾಹ್ನ ೧.೩೫ರ ವೇಳೆ ವಿಮಾನದ ಸಂಪರ್ಕ ಕಡಿತಗೊಂಡಿತ್ತು. ವಿಮಾನದ ಹುಡುಕಾಟಕ್ಕೆ ನಾಲ್ಕು ನೌಕಾಪಡೆ ಹಡಗು ಮತ್ತು ಎರಡು ವಿಮಾನವನ್ನು ಕಳುಹಿಸಲಾಯಿತು. ವಿಮಾನ ಕಣ್ಮರೆಯಾಗುವ ಹೊತ್ತಿಗೆ ಮೈಯಿಕ್ ಮತ್ತು ಯಾಂಗೊನ್ ನಗರಗಳ ದಕ್ಷಿಣ ದಿಕ್ಕಿಗೆ ೧೮ ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು.
ಮ್ಯಾನ್ಮಾರ್ನ ವಾಣಿಜ್ಯ ರಾಜಧಾನಿಯಾಗಿದೆ ದವೆ. ತಾಂತ್ರಿಕ ದೋಷದಿಂದ ಅಪಘಾತ ಉಂಟಾಗಿರಬಹುದು ಎಂದು ನಾವು ಭಾವಿಸುತ್ತೇವೆ. ಅಲ್ಲಿ ವಾತಾವರಣ ಅನುಕೂಲಕರವಾಗಿತ್ತು ಎಂದು ಯಂಗೊನ್ ವಿಮಾನ ನಿಲ್ದಾಣ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದಾರೆ. ನೌಕಾಪಡೆ ಸಮುದ್ರದಲ್ಲಿ ಶೋಧ ಕಾರ್ಯದಲ್ಲಿ ನಿರತವಾಗಿದೆ.

Related posts

Leave a Reply