Breaking News

25 ವರುಷಗಳ ಹಿಂದಿನ ಮಟ್ಟದಲ್ಲಿ ಅರ್ಥಿಕ ಬೆಳವಣಿಗೆ, ಕೇಂದ್ರ ಸರಕಾರಕ್ಕೆ ನೀತಿ ಬಿಸಿ ಮುಟ್ಟಿಸಿದ ರಿಸರ್ವ್ ಬ್ಯಾಂಕ್

ಬಡ್ಡಿ ದರ ಕಡಿತಕ್ಕೆ ಕೇಂದ್ರ ಸರ್ಕಾರದಿಂದ ತೀವ್ರ ಒತ್ತಡ ಕಂಡುಬಂದಿದ್ದರೂ, ಆರ್ಬಿ‌ಐ ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದಲ್ಲಿನ ಹಣಕಾಸು ನೀತಿ ಸಮಿತಿಯು ಯಥಾಸ್ಥಿತಿ ಕಾಯ್ದುಕೊಂಡಿದೆ.
ಸದಸ್ಯ ರವೀಂದ್ರ ಎಚ್. ಧೋಲಾಕಿಯಾ ಅವರ ಭಿನ್ನಮತದ ಹೊರತಾಗಿಯೂ ಉಳಿದ ಸದಸ್ಯರು ಬಡ್ಡಿ ದರಗಳನ್ನು ತಗ್ಗಿಸಲು ಮುಂದಾಗಿಲ್ಲ. ಹಣದುಬ್ಬರವು ನಿರಂತರವಾಗಿ ಕೆಳಮಟ್ಟದಲ್ಲಿ ಇರುವುದರಿಂದ ಬಡ್ಡಿ ದರ ಕಡಿತಕ್ಕೆ ಪೂರಕ ವಾತಾವರಣ ಇದೆ ಎಂದು ಹಣಕಾಸು ಸಚಿವಾಲಯ ಬಲವಾಗಿ ಪ್ರತಿಪಾದಿಸಿದ್ದರೂ, ಆರ್ಬಿ‌ಐ ಅದಕ್ಕೆ ಕಿವಿಗೊಟ್ಟಿಲ್ಲ. ಎಂಪಿಸಿಯ ನಿರ್ಧಾರಕ್ಕೆ ಹಣಕಾಸು ಸಚಿವಾಲಯ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬಡ್ಡಿ ದರ ಕಡಿತ ಮಾಡದಿರುವುದಕ್ಕೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರೂ ಹತಾಶೆ ವ್ಯಕ್ತಪಡಿಸಿದ್ದಾರೆ.
ದೇಶಿ ಆರ್ಥಿಕತೆ ಎರಡು ವರ್ಷಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಬೆಳವಣಿಗೆ ದಾಖಲಿಸಿದೆ. ಸಾಲ ನೀಡಿಕೆ ಪ್ರಮಾಣವು ೨೫ ವರ್ಷಗಳ ಹಿಂದಿನ ಮಟ್ಟದಲ್ಲಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಬಡ್ಡಿ ದರ ಕಡಿತ ಅನಿವಾರ್ಯವಾಗಿತ್ತು ಎಂದು ಅವರು ಹೇಳಿದ್ದಾರೆ. ಬಡ್ಡಿ ದರ ಕಡಿತ ಮಾಡಬೇಕೆಂಬ ಒತ್ತಾಯಕ್ಕೆ ಮಣಿಯದ ಎಂಪಿಸಿ ತನ್ನ ಸ್ವಾಯತ್ತತೆ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಿಸಲು ಬಡ್ಡಿ ದರ ಕಡಿತ ಮಾಡಬೇಕು ಎಂದು ಸರ್ಕಾರ ಒತ್ತಾಯಿಸುತ್ತಿತ್ತು. ಈ ಸಂಬಂಧ ಸಮಿತಿಯ ಸದಸ್ಯರ ಜತೆ ಚರ್ಚಿಸಲೂ ಬಯಸಿತ್ತು. ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಸದಸ್ಯರ ಭೇಟಿಗೆ ದಿನವನ್ನೂ ನಿಗದಿ ಮಾಡಿದ್ದರು. ಚರ್ಚೆಗೆ ಅವಕಾಶ ಮಾಡಿಕೊಡದಿರಲು ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡಿದ್ದರು.

Related posts

Leave a Reply