Header Ads
Breaking News

1ನೇ ಕೊಲ್ಯದಲ್ಲಿ ನೂತನ ಅಂಗನವಾಡಿ ನಿರ್ಮಾಣ-ಶಾಸಕ ಯು.ಟಿ ಖಾದರ್ ಉದ್ಘಾಟನೆ

ಉಳ್ಳಾಲ: ಕೊಲ್ಯ ಶ್ರೀ ರಾಮ ಫ್ರೆಂಡ್ಸ್ ಸರ್ಕಲ್ ಕ್ರೀಡಾಂಗಣವನ್ನು ಮಿನಿ ಸ್ಟೇಡಿಯಂ ಆಗಿ ಪರಿವರ್ತನೆಗೊಳಿಸಲಾಗುವುದು, ಈ ಮೂಲಕ ಯುವಸಮುದಾಯಕ್ಕೆ ಕ್ರೀಡೆಯಲ್ಲಿ ಪ್ರೋತ್ಸಾಹಿಸಲು ಸುಸಜ್ಜಿತ ಕ್ರೀಡಾಂಗಣ, ಮಕ್ಕಳಿಗಾಗಿ ಪಾರ್ಕ್, ವಿಹರಿಸಲು ಗಾರ್ಡನ್ ಹಾಗೂ ವಾಕಿಂಗ್ ಟ್ರ್ಯಾಕ್ ಅನ್ನು ರಚಿಸಲಾಗುವುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಅವರು ಸೋಮೇಶ್ವರ ಪುರಸಭೆ ನಿಧಿ, 14ನೇ ಹಣಕಾಸು ಯೋಜನೆ ಹಾಗೂ ಎಂಆರ್‍ಪಿಎಲ್ ಸಹಯೋಗದೊಂದಿದೆ ರೂ.12,80,000ಅನುದಾನದಡಿ 1ನೇ ಕೊಲ್ಯ ಸೋಮೇಶ್ವರದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ, ಮಕ್ಕಳ ದಿನಾಚರಣೆಯನ್ನು ಆಚರಿಸಿ , ಬೀದಿಬದಿ ವ್ಯಾಪಾರಿಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಮಾತನಾಡಿ ನಿರೀಕ್ಷೆ ಗೆ ಮೀರಿ ಅಚ್ಚುಕಟ್ಟಾದ ಅಂಗನವಾಡಿ ಕೇಂದ್ರ ನಿರ್ಮಾಣ ಆಗಿದೆ. ಎಲ್ಲರೂ ಮಕ್ಕಳಿಗೆ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಧನಲಕ್ಷ್ಮೀ ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಕೋಟೆಕಾರು ಪ.ಪಂ ಅಧ್ಯಕ್ಷೆ ಜಯಶ್ರೀ ಪ್ರಫುಲ್ಲಾ ದಾಸ್, ಎಂಆರ್ ಪಿಎಲ್ ಮಂಗಳೂರು ಇದರ ಪ್ರಬಂಧಕ ಸಿ.ನಾಗೇಶ್ ,ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿಗಳಾದ ಹರೀಶ್ ಕೆ, ಶೈಲಜಾ ಕೆ. ಖಾರ್ವಿ, ಮಾಜಿ ಕೌನ್ಸಿಲರ್ ಗೋಪಾಲಕೃಷ್ಣ , ಅಂಗನವಾಡಿಯ ಅಧಿಕಾರಿ ಶಂಕರಿ, ಅಂಗನವಾಡಿ ಕಾರ್ಯಕರ್ತೆ ತೇಜಾವತಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *