Header Ads
Header Ads
Breaking News

1 ವಾರದಲ್ಲಿ ಅತ್ಯಂತ ಯಶಸ್ವಿಯನ್ನು ಕಂಡ ಬಂಡಿಮಠದ ಇಂದಿರಾ ಕ್ಯಾಂಟೀನ್

ಕಾರ್ಕಳ : ನವಂಬರ್ 21 ರಂದು ಕಾರ್ಕಳದ ಬಂಡಿಮಠದ ಪರಿಸರದಲ್ಲಿ ಇಂದಿರಾ ಕ್ಯಾಂಟೀನ್‌ನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟಿಸಲಾಗಿತ್ತು. ಹಿಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಸಿವು ಮುಕ್ತ ರಾಜ್ಯ ಮಾಡುವ ಗುರಿ ಇಟ್ಟು ಸ್ಥಾಪಿಸಲ್ಪಟ್ಟ ಕಾರ್ಕಳದ ಇಂದಿರಾ ಕ್ಯಾಂಟಿನ್ 1 ವಾರದಲ್ಲಿ ಅತ್ಯಂತ ಯಶಸ್ವಿಯನ್ನು ಕಂಡಿದೆ.

ಮುಂಜಾನೆ 7:30ಕ್ಕೆ ಪ್ರಾರಂಭವಾಗುವ ಕ್ಯಾಂಟಿನ್ ಸುಮಾರು 300 ಮಂದಿಗೆ ಸೀಮಿತವಾಗಿರುವ ಉಪಹಾರ ಬೆಳಗ್ಗೆ 8:30ರ ಒಳಗೆ ಖಾಲಿಯಾಗುತ್ತದೆ. ಹಾಗೂ ಮಧ್ಯಾಹ್ನದ ಹಾಗೂ ರಾತ್ರಿಯ 300 ಜನರಿಗೆ ಸೀಮಿತವಾಗಿರುವ ಊಟ 2 ಗಂಟೆಗಳಲ್ಲಿ ಖಾಲಿಯಾಗುತ್ತದೆ. ಒಳ್ಳೆ ಶುಚಿ ಹಾಗೂ ರುಚಿಯಿಂದ ಕೂಡಿದ ಊಟ ಇಲ್ಲಿ ಬಡವರ ಹಾಗೂ ಕಾರ್ಮಿಕರ ಹಾಗೂ ಶಾಲಾ ವಿದ್ಯಾರ್ಥಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

Related posts

Leave a Reply