Header Ads
Header Ads
Breaking News

10 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ರುಂಡ ಪತ್ತೆ

ಮೂಡುಬಿದಿರೆ : ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಚ್ಚೇರಿಪೇಟೆ ಕೊರಗರ ಕಾಲನಿ ನಿವಾಸಿ ತನಿಯ ಅವರ ಶವವು ರುಂಡವಿಲ್ಲದೇ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿತ್ತು. ಸೋಮವಾರದಂದು ಮತ್ತೆ ಪೋಲೀಸರು ಮೂಡುಬಿದಿರೆ ಅಗ್ನಿಶಾಮಕ ದಳದವರ ನೆರವಿನಿಂದ ಸ್ಥಳದಲ್ಲಿ ಕೂಲಂಕುಷ ಹುಡುಕಾಟ ನಡೆಸಿದಾಗ ಅಲ್ಲೇ ಶವ ಪತ್ತೆಯಾಗಿದ್ದ ಪೊದೆಯ ಸ್ವಲ್ಪ ಮುಂದೆ ನೀರಿನ ಮೇಲ್ಗಡೆ ಶೇಖರಣೆಗೊಂಡಿದ್ದ ಕಸದ ರಾಶಿಯ ಅಡಿ ಭಾಗ ನೀರಿನ ಆಳದಲಿ ಶವದ ರುಂಡವು ಪತ್ತೆಯಾಗಿದೆ. ಬಹಿರ್ದೆಸೆಗೆಂದು ತೋಟದ ಮಧ್ಯೆ ಹೋದವರು ಕಾಲು ಜಾರಿ ಬಿದ್ದು ತನಿಯ ಅವರು ಮೃತಪಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

 

Related posts

Leave a Reply