Header Ads
Breaking News

100ಅನಾಥ ಶವಗಳಿಗೆ ಸಂಸ್ಕಾರ ಒದಗಿಸಿದ ಸಮಾಜಸೇವಕ ವಿಶು ಶೆಟ್ಟಿ

ಅವರು ಎಲ್ಲಿಂದಲೋ ಮನನೊಂದು ಬಂದ ವ್ಯಕ್ತಿ, ದಿಕ್ಕು ತೋಚದೆ ಕಂಗಲಾಗಿ ಉಡುಪಿ ಅಂಬಲಪಾಡಿಯಲ್ಲಿ ನೆಲೆ ಮಾಡಿಕೊಂಡ್ರು, ಉತ್ತಮ ನಡತೆ ಪ್ರಾಮಾಣಿಕತೆಯಿಂದ ಊರಿವರಿಗೆ ಅಚ್ಚುಮೆಚ್ಚಿನವರಾಗಿದ್ರು. ಆದ್ರೆ ಈಗ ಇವರು ಕೇವಲ ನೆನಪಾಗಿ ಉಳಿದಿದ್ದಾರೆ.

ಹೌದು..ಕಳೆದ ಇಪ್ಪತ್ತು ವರ್ಷಗಳ ಹಿಂದೆ, ತನ್ನ ಹೆಸರು ನಾರಾಯಣ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದ ಈ ವ್ಯಕ್ತಿ ಬಾರದ ಲೋಕಕ್ಕೆ ಮರೆಯಾಗಿದ್ದಾರೆ. ಕಳೆದ ಮಾ.31ರಂದು ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಮಾಧವ ಮಂಗಲ ಸಭಾಭವನದ ಸನಿಹ, ರಸ್ತೆ ದಾಟಲು ನಿಂತಿದ್ರು. ಅಜಾಗಕೂರತೆಯಿಂದ ಚಾಲನೆ ಮಾಡುತ್ತಿದ್ದ ಚಾಲಕನ ಕಾರು ಡಿಕ್ಕಿ ಹೊಡೆಯಿತು. ತಲೆ ಭಾಗಕ್ಕೆ ಗಂಭೀರಗೊಂಡ ನಾರಾಯಣ ಪೂಜಾರಿಯನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ, ಕೂಡಲೇ ದಾಖಲಿಸಲಾಯಿತ್ತು. ಅದೇ ದಿನ ಗಾಯಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆಯಿತು. ಸಂಬಂಧಿಕರ ಬರುವ ತನಕ ಶವವನ್ನು ಆಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿತ್ತು. ಸಜ್ಜನ ವ್ಯಕ್ತಿಯ ಮೃತ್ಯು ವಾರ್ತೆ ಕೇಳಿದ ಇಡೀ ಊರಿನ ಜನರ ಕಂಬನಿ ಮಿಡಿಯಿತು.

ತನ್ನವರೆಂದು ಯಾರೂ ಇಲ್ಲದ ಈ ವ್ಯಕ್ತಿಗೆ ಮುಕ್ತಿದಾತ ಅಂಬಲಪಾಡಿಯ ವಿಶು ಶೆಟ್ಟಿ ಅವರು ಶವ ಸಂಸ್ಕಾರವನ್ನು, ಗೌರವಪೂರ್ಣವಾಗಿ ನಡೆಸುವ ಅಲುವಾಗಿ ಇಲಾಖೆಗೆ ಸಹಕರಿಸಲು ಮುಂದಾದರು. ಎ.9, ಮಂಗಳವಾರ ಶವಮಹಜರು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ, ಇಲಾಖೆಯ ಅನುಮತಿ ಪಡೆದು ಪಾರ್ಥಿವ ಶರೀರವನ್ನು ಅಂಬಲಪಾಡಿಯ ಪಾರ್ಕಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವಿಶು ಶೆಟ್ಟಿ ಅವರು ವ್ಯವಸ್ಥೆಗೊಳಿಸಿದರು. ಶವ ಸಂಸ್ಕಾರ ಪೂರ್ವದ ಪ್ರಕ್ರಿಯೆಗಳನ್ನು ಊರ ಹಿರಿಯರು ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಹೂ ಹಾರಗಳ ಸಮರ್ಪಿಸಿ ಅಗಲಿದ ನಾರಾಯಣ್ಣನಿಗೆ ಅಂತಿಮ ಗೌರವ ಸಲ್ಲಿಸಿದರು. ಸ್ಥಳದಲ್ಲಿ ನಾರಾಯಣಣ್ಣನ ಅಗಲಿಕೆಯ ನೋವು ತಾಳಲಾರದೆ ಮಹಿಳೆಯರು ಕಣ್ಣೀರು ಹಾಕುವ ದೃಶ್ಯಗಳು ಮನಕುಲುಕುವಂತಿತ್ತು. ಇದು ಊರ ಜನರು ನಾರಾಯಣ್ಣನ ಮೇಲೆ ಇಟ್ಟಿರುವ ಪ್ರೀತಿ ಏಷ್ಟೆಂದು ಸಾಕ್ಷಿಗೊಳಿಸಿದವು. ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದವರಲ್ಲಿ ನಗರ ಸಭೆ ಸದಸ್ಯ ಹರೀಶ್ ಶೆಟ್ಟಿ, ಮಾಜಿ ನಗರಸಭೆ ಸದಸ್ಯೆ ವಸಂತಿ ಶೆಟ್ಟಿ ಬ್ರಹ್ಮಾವರ, ಊರ ಹಿರಿಯರಾದ ಗೋಪಾಲ ಶೆಟ್ಟಿ ಪ್ರಮುಖರಾಗಿದ್ದರು.

ಅಂತಿಮ ದರ್ಶನ ಪ್ರಕ್ರಿಯೆಗಳು ನಡೆದ ಬಳಿಕ ಪಾರ್ಥಿವ ಶರೀರವನ್ನು ಅಂಬಲಪಾಡಿಯಿಂದ ಗೋವಿಂದ ಅಂತಿಮ ನಾಮಸ್ಮರಣೆಯೊಂದಿಗೆ ಬೀಡಿನಗುಡ್ಡೆ ಹಿಂದು ರುದ್ರಭೂಮಿಗೆ ಸಾಗಿಸಲಾಯಿತು. ಶವವು ವಾರಸುದಾರಿಲ್ಲದ ಶವ ಎಂದು ಪರಿಗಣಿಸಲ್ಪಟ್ಟಿದ್ದರಿಂದ, ಶವ ಧರ್ಮ ಸಂಪ್ರದಾಯದಂತೆ ದಹನಗೊಳಿಸಲು ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣದಿಂದಾಗಿ, ಸಮಾಜಸೇವಕ ವಿಶು ಶೆಟ್ಟಿ ಅವರ ಮುಂದಾಳತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಮಕ್ಷಮ ದಫನ ರೂಪದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು, ಭಾಸ್ಕರ ಮಡಿವಾಳ, ದಫನ ಪ್ರಕ್ರಿಯೆ ನಡೆಸುವಾಗ ಇಲಾಖೆಗೆ ಸಹಕರಿಸಿದರು.

Related posts

Leave a Reply

Your email address will not be published. Required fields are marked *