Header Ads
Header Ads
Header Ads
Breaking News

ಸಚಿವ ರಮಾನಾಥ ರೈ ವಿರುದ್ಧ ಕಿಡಿ ಕಾರಿದ ಹರಿಕೃಷ್ಣ ಬಂಟ್ವಾಳ್

ಕಾಂಗ್ರೆಸ್‌ನ ಉಚ್ಚಾಟಿತ ನಾಯಕ ಹರಿಕೃಷ್ಣ ಬಂಟ್ವಾಳ, ಮತ್ತೆ ರಮಾನಾಥ್ ವಿರುದ್ಧ ಕಿಡಿಕಾರಿದ್ದಾರೆ. ಸಚಿವ ರಮಾನಾಥ್ ರೈ ಅವರು ತಮ್ಮ ಪತ್ನಿ ಹೆಸರಿನಲ್ಲಿ ಅಕ್ರಮ ಆಸ್ತಿ ಮಂಜೂರು ಮಾಡಿರುವ ಬಗ್ಗೆ ದಾಖಲೆ ಸಮೇತ ಹರಿಕೃಷ್ಣ ಬಂಟ್ವಾಳ ಬಿಡುಗಡೆ ಮಾಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವ್ರು, ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸರ್ವೆ ನಂ.20/2ರ ಪೈಕಿ 2.04 ಎಕ್ರೆ ಜಾಗ ಮತ್ತು ಸರ್ವೆ ನಂ.38/2ರ ಪೈಕಿ 1 ಎಕ್ರೆ ಜಾಗ ಸೇರಿದಂತೆ ಒಟ್ಟು 3.04ಎಕ್ರೆ ಜಾಗವನ್ನು ತಮ್ಮ ಪತ್ನಿ ಶೈಲಾ ಆರ್.ರೈ ಹೆಸರಿನಲ್ಲಿ ಅಕ್ರಮ ಸಕ್ರಮದಡಿ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿ ಮಂಜೂರು ಮಾಡಿಸಿರುವುದಾಗಿ ಆರೋಪಿಸಿದರು. ಮಾತ್ರವಲ್ಲದೇ ಸಚಿವ ರಮಾನಾಥ್ ರೈಯವರ ಕೂಗಳತೆ ದೂರದಲ್ಲಿನ ಕಳ್ಳಿಗೆ ಗ್ರಾಮದ ಸರ್ವೇ 97/1ರಲ್ಲಿ ಸರ್ಕಾರದ 30 ಎಕ್ರೆ ಜಮೀನಿನಲ್ಲಿ 10 ಎಕ್ರೆ ಭೂಮಿಯಲ್ಲಿ ಅಕ್ರಮವಾಗಿ ರಬ್ಬರ್ ತೋಟ ಮಾಡಲಾಗಿದೆ. ಇದಕ್ಕೆ ಅವರು ಉತ್ತರವನ್ನು ನೀಡಬೇಕೆಂದರು , ಮಾತ್ರವಲ್ಲದೇ ಈ ಪ್ರಕರಣದ ಬಗ್ಗೆ ಎಸಿಬಿ ಮೂಲಕ ತನಿಖೆ ನಡೆಸಬೇಕು. ಇನ್ನು ನನ್ನ ಮೇಲೆ ಈಗಾಗಲೇ ಬೆದರಿಕೆ ಮೂಲಕ ಪ್ರತಗಳು ಬಂದಿದೆ ಎಂದು ಸುದ್ಧಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

Related posts

Leave a Reply