Header Ads
Header Ads
Header Ads
Breaking News

108 ಆಂಬ್ಯುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ಕಡಬ ಸಮೀಪದಲ್ಲಿ ನಡೆದ ಘಟನೆ

 

ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು 108 ಆಂಬ್ಯುಲೆನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಕಡಬ ಸಮೀಪದ ಪದವು ಎಂಬಲ್ಲಿ ನಡೆದಿದೆ.ಕೋಡಿಂಬಾಳ ಗ್ರಾಮದ ದಂಡುಗುರಿ ನಿವಾಸಿ ರವೀಂದ್ರ ಎಂಬವರ ಪತ್ನಿ ಭವಾನಿ ಎಂಬವರು ಗುರುವಾರ ಮುಂಜಾನೆ ಹೆರಿಗೆ ನೋವು ಬಂದ ಕಾರಣ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿ ತಾಸು ಕಳೆದರೂ ವೈದ್ಯರು ಅಗಮಿಸದ ಕಾರಣ ದಾದಿಯರು ಕೊನೆಯ ಕ್ಷಣದಲ್ಲಿ ತುರ್ತಾಗಿ ಪುತ್ತೂರಿಗೆ ತೆರಳಲು ಸೂಚಿಸಿದರೆನ್ನಲಾಗಿದೆ. ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ತೆರಳುತ್ತಿದ್ದಾಗ ಪದವು ಎಂಬಲ್ಲಿ ಭವಾನಿಯವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇದೀಗ ಆರೋಗ್ಯದಿಂದಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭವಾನಿಯವರ ಮೊದಲನೇ ಹೆರಿಗೆಯೂ 108 ಆಂಬ್ಯುಲೆನ್ಸ್ ನಲ್ಲೇ ಆಗಿತ್ತು. ಇದೀಗ ಎರಡನೇ ಹೆರಿಗೆಯೂ 108 ಆಂಬ್ಯುಲೆನ್ಸ್ ನಲ್ಲೇ ಆಗಿದ್ದು, ಸುಸೂತ್ರ ಹೆರಿಗೆಗೆ ಇ‌ಎಂಟಿ ಚಂದ್ರಶೇಖರ ಹಾಗೂ ಪೈಲಟ್ ಚಂದ್ರಶೇಖರ ಗೌಡ ಸಹಕರಿಸಿದ್ದಾರೆ.

Related posts

Leave a Reply